'ಬಾಲ್ಯದ ಮುಗ್ಧ ನಗೆ, ಯೌವನದ ತುಂಬು ನಗೆ
ನಡು ಹರಯದ ಆಳ ನಗೆ, ವೃದ್ಧಾಪ್ಯದ ವಿಷಾದ ನಗೆ,
ಬಾಳಿನುದ್ದಕ್ಕೂ ನಮ್ಮೊಡನೆ ಇರುವ ನಗೆ.'
ಇದು ಬರೀ ನಗೆಯ ಬಗ್ಗೆ ವಿಶ್ಲೇಷಣೆ ಅಲ್ಲ. ಮಾನವ ಜನಾಂಗದ ಸೂತ್ರ ಅಡಗಿರುವುದು ಇಲ್ಲಿಯೇ! ಅದರ ಮೂಲಕ ರೂಪುಗೊಳ್ಳುವುದೇ ಬದುಕು.
ಮಹಾಭಾರತ ಬರೆದ ವ್ಯಾಸ ಮಹರ್ಷಿಯನ್ನ ಒಬ್ಬ ಚಿಂತಕ ಪ್ರಶ್ನಿಸಿದನಂತೆ. ಮಹಾಭಾರತದ ಬಗ್ಗೆ ಅರಿತೇ ಬಿಡುವ ತವಕ ಆತನದು.
ಸ್ವಾಮಿ ಮಹಾಭಾರತದ ಒಟ್ಟು ಸಂದೇಶವೇನು? ವಿಶಾಲಾರ್ಥ ಬಿಟ್ಟು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಅದರ ಅಶಯ ತಿಳಿಸಿ.
ಅದಕ್ಕೆ ವ್ಯಾಸರು ಕೊಟ್ಟ ಉತ್ತರ:
ಪರೋಪಕಾರವೆ ಪುಣ್ಯ, ಪರಪೀಡನೆಯೆ ಪಾಪ.