ಸಾರಾಂಶ

ಮಕ್ಕಳ ಜ್ಞಾನವಿಕಾಸ, ಮನರಂಜನೆ, ವ್ಯಕ್ತಿತ್ವ ವಿಕಸನಕ್ಕಾಗಿ
ವಸಂತ ಪ್ರಕಾಶನದಿಂದ ವಿನೂತನ ಕೊಡುಗೆಗಳು;
ಮಕ್ಕಳನ್ನು ಆಕರ್ಷಿಸಿ ಹೊಸ ಲೋಕಕ್ಕೆ ಕರೆದೊಯ್ಯುವ ಚಿತ್ರಗಳು;
ಮಕ್ಕಳ ಬದುಕಿಗೆ ಉನ್ನತ ಬದುಕಿನ ಮಾರ್ಗವನ್ನು ತೋರಿಸುವ ಸರಳ ಶೈಲಿಯ ಚಿತ್ತಾಕರ್ಷಕ ಕಥೆಗಳು. ಮಕ್ಕಳಿರುವ ಪ್ರತಿಯೊಂದು ಮನೆಯಲ್ಲೂ ಇರಬೇಕಾದ ಪುಸ್ತಕಗಳು. ಶ್ರೀಕೃಷ್ಣನ ಲೀಲೆಗಳು, ತೆನಾಲಿ ರಾಮಕೃಷ್ಣ, ಅಕ್ಬರ್-ಬೀರಬಲ್ ಕಥೆಗಳು, ಅಜ್ಜ-ಅಜ್ಜಿ ಕಥೆಗಳು, ವಿನೂತನ ಬೇತಾಳ ಕಥೆಗಳು - ಹೀಗೆ ವೈವಿಧ್ಯಮಯ ವಿಷಯಗಳಲ್ಲಿ.

ಅಕ್ಬರ್-ಬೀರ್‌ಬಲ್ ಜಾಣ್ಮೆಯ ಕಥೆಗಳು
ಲೇಖಕರು:
ಜಿ ಕೆ ಮಧ್ಯಸ್ಥ
ಪ್ರಕಾರ:
ಪ್ರವಾಸ ಕಥನ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಕ್ರೌನ್
ಮುದ್ರಣ:
2018
ರಕ್ಷಾಪುಟ:
ಎಡಿಟ್ ಇನ್ ಇಂಟರ್ ನ್ಯಾಷನಲ್ಸ್
ಪುಟಗಳು:
80
ಬೆಲೆ:
40 ರೂ.
ಲೇಖಕರ ಪರಿಚಯ
ಹಿರಿಯ ಪತ್ರಕರ್ತ ಜಿ.ಕೆ. ಮಧ್ಯಸ್ಥ ಅವರು ಹುಟ್ಟಿದ್ದು ೧೯೪೫ರಲ್ಲಿ; ಕಾಸರಗೋಡು ತಾಲೂಕಿನ ಬೇಳ ಗ್ರಾಮದ ಕುಂಜಾರು ಎಂಬಲ್ಲಿ. ಪ್ರಾರಂಭಿಕ ವಿದ್ಯಾಭ್ಯಾಸ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ. ನಂತರ ಕಾಸರಗೋಡಿನ ಸರ್ಕಾರಿ ಕಾಲೇಜಿನಿಂದ ಬಿ.ಎ. ಪದವಿ. ನಾಲ್ಕು ದಶಕಗಳ ಕಾಲ ಉದಯವಾಣಿ, ಮುಂಗಾರು, ಪ್ರಜಾವಾಣಿ ಹಾಗೂ ವಿಜಯಕರ್ನಾಟಕ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿರುವ ಅವರು ಆರ್ಥಿಕ ವಿಷಯಗಳನ್ನು ಕುರಿತಂತೆ ಹಾಗೂ ಶಬ್ದಗಳ ಹುಟ್ಟು ಮತ್ತು ಅವು ಪಡೆಯುವ ವಿವಿಧ ಸ್ವರೂಪಗಳನ್ನು ಕುರಿತಂತೆ ಕ್ರಮವಾಗಿ ದುಡ್ಡುಕಾಸು ಮತ್ತು ಪದೋನ್ನತಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ ಡಾ. ಅಬ್ದುಲ್ ಕಲಾಂ ಅವರ ಟರ್ನಿಂಗ್ ಪಾಯಿಂಟ್ಸ್ ಮತ್ತು ನನ್ನ ಪಯಣ (ಮೈ ಜರ್ನಿ) ಆತ್ಮಕಥೆಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ತಂದಿದ್ದಾರೆ. ಅಲ್ಲದೆ, ಡಾ. ಕಲಾಂ ಅವರ ಜೀವನ ಚರಿತ್ರೆ ಕಲಾಂ ನಿಮಿಗಿದೋ ಸಲಾಂ ಕೃತಿಯನ್ನೂ ಬರೆದಿದ್ದಾರೆ