ಮಂಗಳ ವಾದ್ಯಗಳ ತೀವ್ರತೆ ರಾಹುಲ್ನ ಹಸೆಮಣೆಯತ್ತ ಕರೆದೊಯ್ದಿತು. ಮಂಗಳ ಸೂತ್ರ ಹಿಡಿದಿದ್ದ ಗಂಡು ಬಗ್ಗಿ ದೇವಿಯ ಕೊರಳು ಬಳಸಿ ಮುಡಿ ಹಾಕುತ್ತಿದ್ದ. ಬರೀ ಹರಶಿನ ದಾರದಲ್ಲಿ ಪೋಣಿಸಿದ ಮಾಂಗಲ್ಯ ಎನ್ನುವ ಹೆಸರಿಟ್ಟ. ಚಿನ್ನಕ್ಕೊಂದು ಆಕಾರಕೊಟ್ಟ ಒಡವೆ. ಈಕ್ಷಣದಿಂದ ಅವರಿಬ್ಬರು ಕಷ್ಟ, ಸುಖದಲ್ಲಿ ಸಮಾನ ಭಾಗಿಗಳು, ಇದು ಹೇಗೆ? ಆಧುನಿಕ ಯುಗದಲ್ಲಿ ಹೆಣ್ಣು ಮನೆಯಲ್ಲಿ ಕೂಡದೆ ಪುರುಷನ ಭುಜಕ್ಕೆ ಭುಜವಾಗಿ ದುಡಿಯುತ್ತಿದ್ದಾಳೆ. ಕೊರಳು, ಕೈ ಬೆರಳುಗಳು ಎಷ್ಟೋ ಜನರಿಗೆ ಸೋಕಿರಬಹುದು. ಕೈ ಕೈ ಹಿಡಿದು ಸಪ್ತಪದಿ ತುಳಿದತಕ್ಷಣದಿಂದ ನಾವು ಒಬ್ಬರಿಗೊಬ್ಬರು ಎನ್ನುವ ಭಾವನೆ ಹೇಗೆ ಬರುವುದು?