ಸಾರಾಂಶ

ವಸಂತ ಪ್ರಕಾಶನ ಪ್ರಕಟಿಸುತ್ತಿರುವ ಈ ವಿಖ್ಯಾತರ ವ್ಯಕ್ತಿಚಿತ್ರ ಮಾಲೆಯಲ್ಲಿ ಧರ್ಮ, ತತ್ವಶಾಸ್ತ್ರ, ಚರಿತ್ರೆ, ವಿಜ್ಞಾನ, ಅರ್ಥಶಾಸ್ತ್ರ, ಪರಿಸರ, ಉದ್ಯಮ, ರಾಜಕೀಯ, ಸಮಾಜ ಸುಧಾರಣೆ, ಸಾಹಿತ್ಯ, ಸಂಗೀತ, ಲಲಿತ ಕಲೆ, ಕ್ರೀಡೆ ಮೊದಲಾದ ಕ್ಷೇತ್ರಗಳಲ್ಲಿ ಹೊಸ ಹೊಸ ಆವಿಷ್ಕಾರಗಳನ್ನೂ ಅದ್ವಿತೀಯ ಸಾಧನೆಗಳನ್ನೂ ಮಾಡಿದ ಮೇಧಾವಿಗಳ ಜೀವನಚಿತ್ರಗಳಿವೆ. ಇವುಗಳಲ್ಲಿ ಪ್ರತಿಯೊಬ್ಬ ಮೇಧಾವಿಯ ವಿಚಾರಗಳನ್ನು ಅವರ ಕಾಲದ ಸಾಮಾಜಿಕ ಹಾಗೂ ಬೌದ್ಧಿಕ ಪರಿಸರದಲ್ಲಿಟ್ಟು ವಿಶ್ಲೇಷಿಸಲಾಗಿದೆ. ಸಮಾಜದ ಮೇಲೆ ಆ ಮೇಧಾವಿ ಬೀರಿದ ಪ್ರಭಾವ, ಮನುಷ್ಯನನ್ನೂ ಪರಿಸರವನ್ನೂ ಅರ್ಥಮಾಡಿಕೊಳ್ಳುವ ದಿಸೆಯಲ್ಲಿ ಅವರು ನೀಡಿರುವ ನಿರ್ದಿಷ್ಟ ಕೊಡುಗೆ, ಅವರ ವಿಚಾರಗಳ ಸ್ಫೂರ್ತಿಯಿಂದ ರೂಪುಗೊಂಡಿರುವ ಜೀವನಕ್ರಮ, ಇವುಗಳನ್ನೂ ವಿವರಿಸಲಾಗಿದೆ. ಸಾಧ್ಯವಾದ ಕಡೆಗಳಲ್ಲೆಲ್ಲ ಮೇಧಾವಿಗಳ ಮಾತುಗಳಿಂದ, ಬರವಣಿಗೆಗಳಿಂದ ಸೂಕ್ತವೆಂದು ಕಂಡುಬಂದ ಭಾಗಗಳನ್ನು ಉದ್ಧರಿಸಲಾಗಿದೆ. ಹೊಸ ಸಿದ್ಧಾಂತಗಳನ್ನು ಸೃಷ್ಟಿಸಿದವರ, ಹೊಸ ಚಳವಳಿಗಳನ್ನು ಸ್ಥಾಪಿಸಿದವರ, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮಹತ್ವದ ಪ್ರಭಾವವೂ ಘನತೆಯೂ ಇದ್ದು, ಹೊಸ ಆವಿಷ್ಕಾರಗಳನ್ನೋ ಅದ್ವಿತೀಯ ಸಂಯೋಜನೆಯನ್ನೋ ಮಾಡಿದವರ ಬಗೆಗೆ ವಿಶೇಷ ಗಮನ ನೀಡಲಾಗಿದೆ. ಒಟ್ಟಿನಲ್ಲಿ ಈ ಪುಸ್ತಕಗಳು ಸಂತೋಷದಿಂದ ಓದಬಲ್ಲ ಕೃತಿಗಳಾಗಿರುವಂತೆಯೇ ನಮ್ಮ ನಾಗರಿಕತೆಯನ್ನು, ಅದರ ವಿಕಾಸದ ವೈಚಾರಿಕ ಹಾಗೂ ಆಧ್ಯಾತ್ಮಿಕ ಸ್ರೋತಗಳನ್ನು, ಭವಿಷ್ಯದ ಒಲವುನಿಲುವುಗಳನ್ನು ಆಳವಾಗಿ ಅರಿಯಲು ಸಹಾಯಕವಾಗಿವೆ. ಇವುಗಳನ್ನು ಓದುವ ಮೂಲಕ ತಮ್ಮ ಜೀವನದರ್ಶನ ಏನೆಂದು ಸ್ಪಷ್ಟಪಡಿಸಿಕೊಳ್ಳಬಲ್ಲ ಸ್ವತಃ ಮೇಧಾವಿಗಳಾದರೆ ಆಶ್ಚರ್ಯವಿಲ್ಲ.

ಗುಬ್ಬಿ ವೀರಣ್ಣ
ಲೇಖಕರು:
ಕೆ ಎನ್ ಭಗವಾನ್
ಪ್ರಕಾರ:
ಜೀವನಚರಿತ್ರೆ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಕ್ರೌನ್
ಮುದ್ರಣ:
2015
ರಕ್ಷಾಪುಟ:
ಚನ್ನಕೇಶವ
ಪುಟಗಳು:
84
ಬೆಲೆ:
35 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು