ಸಾರಾಂಶ

''ರಾಗ ಬೃಂದಾವನ' ಕಾದಂಬರಿ ಓದಿದ ಒಬ್ಬ ಓದುಗರ ಪ್ರತಿಕ್ರಿಯೆ : ಮಹಾನ್ ಗಾಯಕ ಸೈಗಾಲ್, ಅಪ್ರತಿಮ ಸಂಗೀತ ನಿರ್ದೇಶಕ ನೌಷಾದ್ ರಾಗ ಸಂಯೋಜನೆಯಲ್ಲಿ 'ಷಹಜಹಾನ್' ಚಿತ್ರದಲ್ಲಿ ಹಾಡಿದ 'ಜಬ್ ದಿಲ್ ಹಿ ಟೂಟ್ ಗಯಾ, ಹಮ್ ಜೀಕೆ ಕ್ಯಾ ಕರೇಂಗೆ' ಎಂಬ ಹಾಡು ಒಂದು ಅಮರ ಗೀತೆ. ಇನ್ನೊಂದು ವಿಸ್ಮಯ ಸಂಗತಿಯೆಂದರೆ ಸೈಗಾಲ್ ಶವಯಾತ್ರೆ ನಡೆದಾಗ ರಸ್ತೆಯಲ್ಲಿ ಗೋಷ್ಠಿ ಗಾನವಾಗಿ ಹೊರ ಹೊಮ್ಮಿದ್ದು 'ಜಬ್ ದಿಲ್ ಹಿ ಟೂಟ್ ಗಯಾ...' ಭಗ್ನವಾಗಿದ್ದು ಸೈಗಾಲ್ ಹೃದಯ ಮಾತ್ರವೇ ಅಲ್ಲ, ಆ ಹಾಡಿನ ಮೋಡಿಗೆ ಒಳಗಾದ ಅಸಂಖ್ಯಾತ ಹೃದಯಗಳು ಕೂಡ. ಹಾಗೆಯೇ ಈ ಕಾದಂಬರಿ ಓದಿನ ನಡುವೆ ನನ್ನ ಹೃದಯವೂ ಭಗ್ನವಾಗಿತ್ತು. ಆದರೆ ಸುಖಾಂತವಾಗಿ ನನ್ನ ಹೃದಯದಲ್ಲಿ ರಾಗ ಮೂಡಿಸಿದೆ. ಇಂತಹ ಹಲವಾರು ಪ್ರತಿಕ್ರಿಯೆಗಳು ಈ ಕೃತಿಗೆ ಹರಿದುಬಂದಿವೆ.

ರಾಗ ಬೃಂದಾವನ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1983
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
184
ಬೆಲೆ:
140 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು