ಸಾರಾಂಶ

ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ಜೀವನದ ಗುರಿಗಳು ಮೊಳಕೆಯೊಡೆಯುವ ಕಾಲಘಟ್ಟದಲ್ಲಿ ಸಕಾರಾತ್ಮಕ ಚಿಂತನೆಗಳನ್ನು ತುಂಬಬೇಕೆನ್ನುವ ಅಭಿಲಾಷೆಯಿಂದ
ಈ 'ಮಹಾನ್ ವ್ಯಕ್ತಿಗಳ ಸಂಕಲ್ಪ-ಸಾಧನೆ ಮಾಲೆ'ಯನ್ನು ಹೊರತರುತ್ತಿದ್ದೇವೆ. ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಗಳಿಕೆಗಾಗಿ, ಸಮಾಜದ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅನೇಕ ಸ್ಮರಣೀಯ ಸಾಧಕರ ಜೀವನ ವೃತ್ತಾಂತಗಳನ್ನು ಮಾಲೆಯ ಪುಸ್ತಕಗಳು ಕಟ್ಟಿಕೊಡುತ್ತವೆ. ಈ ಮೂಲಕ ಇವು ಯುವ ಜನತೆಯ
ಬದುಕಿಗೊಂದು ಸ್ಪಷ್ಟ ಧ್ಯೇಯ ಮಾರ್ಗವನ್ನು ತೋರಿಸಿಕೊಡುತ್ತವೆ ಎಂಬ ವಿನಮ್ರ ಭಾವ ನಮ್ಮದು.

ಟಿಪ್ಪು ಸುಲ್ತಾನ್
ಲೇಖಕರು:
ಜಿ ಕೆ ಮಧ್ಯಸ್ಥ
ಪ್ರಕಾರ:
ಜೀವನಚರಿತ್ರೆ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಡೆಮಿ
ಮುದ್ರಣ:
2016
ರಕ್ಷಾಪುಟ:
ಮನೋಜ್ ಪಬ್ಲಿಕೇಷನ್
ಒಳ ಚಿತ್ರಗಳು:
ಮನೋಜ್ ಪಬ್ಲಿಕೇಷನ್
ಪುಟಗಳು:
96
ಬೆಲೆ:
60 ರೂ.
ಲೇಖಕರ ಪರಿಚಯ
ಹಿರಿಯ ಪತ್ರಕರ್ತ ಜಿ.ಕೆ. ಮಧ್ಯಸ್ಥ ಅವರು ಹುಟ್ಟಿದ್ದು ೧೯೪೫ರಲ್ಲಿ; ಕಾಸರಗೋಡು ತಾಲೂಕಿನ ಬೇಳ ಗ್ರಾಮದ ಕುಂಜಾರು ಎಂಬಲ್ಲಿ. ಪ್ರಾರಂಭಿಕ ವಿದ್ಯಾಭ್ಯಾಸ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ. ನಂತರ ಕಾಸರಗೋಡಿನ ಸರ್ಕಾರಿ ಕಾಲೇಜಿನಿಂದ ಬಿ.ಎ. ಪದವಿ. ನಾಲ್ಕು ದಶಕಗಳ ಕಾಲ ಉದಯವಾಣಿ, ಮುಂಗಾರು, ಪ್ರಜಾವಾಣಿ ಹಾಗೂ ವಿಜಯಕರ್ನಾಟಕ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿರುವ ಅವರು ಆರ್ಥಿಕ ವಿಷಯಗಳನ್ನು ಕುರಿತಂತೆ ಹಾಗೂ ಶಬ್ದಗಳ ಹುಟ್ಟು ಮತ್ತು ಅವು ಪಡೆಯುವ ವಿವಿಧ ಸ್ವರೂಪಗಳನ್ನು ಕುರಿತಂತೆ ಕ್ರಮವಾಗಿ ದುಡ್ಡುಕಾಸು ಮತ್ತು ಪದೋನ್ನತಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ ಡಾ. ಅಬ್ದುಲ್ ಕಲಾಂ ಅವರ ಟರ್ನಿಂಗ್ ಪಾಯಿಂಟ್ಸ್ ಮತ್ತು ನನ್ನ ಪಯಣ (ಮೈ ಜರ್ನಿ) ಆತ್ಮಕಥೆಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ತಂದಿದ್ದಾರೆ. ಅಲ್ಲದೆ, ಡಾ. ಕಲಾಂ ಅವರ ಜೀವನ ಚರಿತ್ರೆ ಕಲಾಂ ನಿಮಿಗಿದೋ ಸಲಾಂ ಕೃತಿಯನ್ನೂ ಬರೆದಿದ್ದಾರೆ