ನೀನೊಬ್ಬ ಜಗದೊಳಗೆ ನಿನ್ನೊಳಗದೊಂದು ಜಗ
ನೀನೆ ಜಗ, ನೀನಿರದ ಜಗವುಂಟೆ ನಿನಗೆ? |
ತಾನೆ ಜಗವೆಲ್ಲವೆಂದರಿತಂಗೆ ಹಗೆಯೆಲ್ಲಿ?
ಏನಿಹುದವಂಗನ್ಯ-ಮರುಳ ಮುನಿಯ ||
- ಪಜ್ಯ ಡಿ.ವಿ.ಜಿ.
ಇತರರಿಗಿಂತ ತಾನು ಶ್ರೇಷ್ಠ ಎಂಬ ಭಾವವೇ ಅಹಂಕಾರ. ದೇಶ, ಭಾಷೆ, ಐಶ್ವರ್ಯ, ವಿದ್ಯೆ, ಕೆಲಸ ಹಾಗೂ ಇನ್ನು ಅನೇಕ ಕಡೆಗಳಲ್ಲಿ ದರ್ಪ ತೋರುತ್ತದೆ. ಅದೆಲ್ಲ ಇಲ್ಲವಾಗಿ ಜ್ಞಾನೋದಯದ ಅಂಕುರವೆ ಸರಳತೆ.
ಕಾರು ಹೊರಟನಂತರವೆ ಚಾರುಲತ ಹೊರಗೆ ಬಂದಿದ್ದು. "ದಾಂಪತ್ಯಕ್ಕೆ ಬೇಕಾಗಿರೋದು ಪ್ರೀತಿ, ಸಾಮರಸ್ಯ. ಒತ್ತಡಕ್ಕಾಗಿ, ವ್ಯವಸ್ಥೆಗಾಗಿ ಬೇರೆಯವರನ್ನು ಮೆಚ್ಚಿಸಲು ಸಾಧ್ಯವಿಲ್ಲ, ದಯವಿಟ್ಟು ಕ್ಷಮಿಸಿ" ಎಂದು ಸರಳವಾಗಿ ಹೇಳಿ ಹೊರಗೆ ಹೋದಳು. ಅಲ್ಲಿ ಅಹಂಕಾರವಿರಲಿಲ್ಲ..