'ಅಗ್ನಿಮಿಳೇ ಪುರೋಹಿತಂ.... ಯಜ್ಞಸ್ಯ ದೇವಮೃತ್ವಿಜಂ |
ಹೊತಾರಂ ರತ್ನಧಾತಮಂ ||೧||
ಮನುಕುಲದ ಅತ್ಯಂತ ಪುರಾತನವಾದ ವೇದಗಳಲ್ಲಿ ಮೊದಲನೆಯದಾದ ಋಗ್ವೇದದ ಮೊಟ್ಟ ಮೊದಲ ಸಾಲು 'ಅಗ್ನಿದೇವನೇ ನಿನ್ನನ್ನು ಪ್ರಾರ್ಥಿಸುತ್ತಿದ್ದೇವೆ. ಅಂಧಕಾರವನ್ನ ಕರಗಿಸಿ ಬೆಳಕು ನೀಡುವವನೇ, ನಿನ್ನೆಡೆಗೆ ಅನುದಿನವು ಬರುತ್ತಿದ್ದೇವೆ. ಅತ್ಯಂತ ಭಕ್ತಿಪ ಕೃತಜ್ಞತಾಭಾವದಿಂದ ನಿನಗಿದೋ ವಂದನೆ.' ಇದು ಸನಾತನ ಹಿಂದುಧರ್ಮಕ್ಕೆ ಭಾರತೀಯ ಸಂಸ್ಕೃತಿಗೆ ಹಿಡಿದ ಕನ್ನಡಿ. ಇದರಿಂದ ಪ್ರಭಾವಿತರಾದವರು ಅಸಂಖ್ಯಾತ ಮಹನೀಯರಲ್ಲಿ ಜರ್ಮನಿಯ ಪ್ರಖ್ಯಾತ ವಿದ್ವಾಂಸರಾದ ಮ್ಯಾಕ್ಸ್ ಮುಲ್ಲರ್ ಒಬ್ಬರು.
ವಿದೇಶದಲ್ಲಿ ನೆಲೆಸಿದ ಕೃಷ್ಣಪ್ರಸಾದ್ ಅಗ್ನಿಹೋತ್ರಿ ತನ್ನ ಮಗನ ಮುಂದೆ ಪಠಿಸುತ್ತ ತನ್ನ ದೇಶದ ಹಿರಿಮೆಯನ್ನು ಒತ್ತ