ಸಾರಾಂಶ

ಸಿದ್ಧಾಂತವನ್ನು ಲೆಕ್ಕಿಸಬೇಡಿ, ಮೂಢನಂಬಿಕೆಯನ್ನು ಲೆಕ್ಕಿಸಬೇಡಿ, ಕೋಮು, ಚರ್ಚ್, ದೇವಸ್ಥಾನ ಇವುಗಳನ್ನು ಲೆಕ್ಕಿಸಬೇಡಿ. ಪ್ರತಿಯೊಬ್ಬ ಮಾನವನ ಜೀವನದ ಸಾರವಾದ ಅಧ್ಯಾತ್ಮದೊಂದಿಗೆ ಇವನ್ನು ಹೋಲಿಸಿದರೆ ಇವಕ್ಕೆ ಬೆಲೆ ಇಲ್ಲ. ಮನುಷ್ಯನಲ್ಲಿ ಇದು ಹೆಚ್ಚು ವಿಶದವಾಗಿ ಸ್ಪಷ್ಟವಾಗಿ ತೋರಿದಷ್ಟು ಸತ್ಕಾರ್ಯಸಾಧನೆಗೆ ಅವನು ಮಹಾ ಶಕ್ತಿಯಾಗುವನು.
- ಸ್ವಾಮಿ ವಿವೇಕಾನಂದ
ನಮಗೆಲ್ಲ ಫೇಸ್ಬುಕ್ನಲ್ಲಿ ಸಾವಿರಾರು ಫ್ರೆಂಡ್ಗಳು ಇದ್ದಾರೆ. ಜೊತೆಗೆ ಅದ್ಭುತವಾದ ವೈಫೈ ಸಂಪರ್ಕ ಸೃಷ್ಟಿಸಿಕೊಂಡು ನಮ್ಮದೇ ಆದ ವೈಯಕ್ತಿಕ ಲೋಕವನ್ನು ಸೃಷ್ಟಿಸಿಕೊಂಡಿದ್ದೇವೆ. ಆದರೆ ವೈಯಕ್ತಿಕ ಸಂಪರ್ಕಗಳು ಕಡಿಮೆಯಾಗುತ್ತಿದೆ. ಭಾವನಾತ್ಮಕ (Emotional well-being) ಸ್ವಾಸ್ಥ್ಯ ಕಾಪಾಡಿಕೊಳ್ಳಲು ಸಾಮಾಜಿಕ ಸಂಪರ್ಕಬೇಕು. ಎಲ್ಲ ಲೇಬಲ್ಗಳನ್ನು ಪಕ್ಕಕ್ಕೆ ಸರಿಸಿ ನಾವೆಲ್ಲ ಒಂದೇ ಎನ್ನುವ ಭಾವ ಬೆಳೆಸಿಕೊಂಡು ಬದುಕಿದರೆ ಜಗತ್ತು ಮತ್ತಷ್ಟು ಸುಂದರವಾಗಿ ಕಾಣುತ್ತದೆ.
ಅಂಥ ಆನಂದಮೂರ್ತಿಗಳನ್ನು ಈ ಕಾದಂಬರಿಯಲ್ಲಿ ಕಾಣಬಹುದು.

ಆನಂದಯಜ್ಞ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
2016
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
208
ಬೆಲೆ:
160 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು