ನಾ ನಿನಗೆ ನೀ ನನಗೆ
ಜೇನಾಗುವಾ
ರಸ ದೇವಗಂಗೆಯಲಿ
ಮೀನಾಗುವಾ
ಹೂವಾಗುವಾ, ಹಣಾಗುವ
ರತಿ ರೂಪಿ ಭಗವತಿಗೆ
ಮೂಡಿಪಾಗುವಾ
- ರಾಷ್ಟ್ರಕವಿ ಕುವೆಂಪು
ಪ್ರೇಮ, ಸಂಬಂಧ ಒಂದು ಅದ್ಭುತ ಸೆಳೆತ, ಒಬ್ಬರನೊಬ್ಬರು ಅರಿತಿರದ, ಅದೂವರೆಗೂ ಕಂಡು ಕೇಳಿ ಅರಿಯದ ಎರಡು ಜೀವಗಳು, ವಿವಾಹದ ಆವೊಂದು ದಿನ, ಆವೊಂದು ಕ್ಷಣ, ಹೀಗೆ ಬೆಸೆಯಲ್ಪಡುತ್ತಾರೆ. ಆಗ ಅರಳುವುದು ನೂರು ಕಾಮನಬಿಲ್ಲು, ನವಿಲುಗರಿಯ ಮೃದು ಸ್ಪರ್ಶ. ಸೃಷ್ಟಿಯ ಚಮತ್ಕಾರ ಎನ್ನೋಣವೇ?
ಅಂದು ತನಕ ಬಂಧಿಸಿದ್ದ
ನನ್ನ ಮನದ ಬಾಗಿಲು
ಒಂದೇ ಸಲಕೆ ತೆರೆದು ಹೋಯ್ತು
ಅವಳು ಒಳಗೆ ಹೊಕ್ಕಳು
ತೀ.ನಂ.ಶ್ರೀ
ಅಂದು ಅವನೆದೆಯನ್ನು ಹೊಕ್ಕ ವರ್ಣ ಅಲ್ಲೆ ನಿಂತಳು. ಪ್ರೀತಿ, ಪ್ರೇಮದ ಸೃಷ್ಟಿಯ ಚಮತ್ಕಾರವೇ ವಿವಾಹ ಸ್ವರ್ಗದಲ್ಲಿ ನಡೆದರೇ, ಡೈವೋರ್ಸ್ಗೂ ಅಲ್ಲಿನ ಅಪ್ಪಣೆ ಬೇಕಲ್ಲ?