ಬದುಕೇ ಒಂದು ಒಗಟು !
ಕುತೂಹಲವಿಲ್ಲದಿದ್ದರೆ ಪ್ರಪಂಚದ ಬಂಡಿ ಇಷ್ಟು ದೂರ ಸಾಗಿ ಬರುತ್ತಿರಲಿಲ್ಲ. ಹುಟ್ಟಿಕೊಳ್ಳುವ ಪ್ರಶ್ನೆಗಳು ಜಗತ್ತನ್ನ ಮುನ್ನಡೆಸುತ್ತಿವೆ.
ಕೆಲವರಿಗೆ ಏನೂ ಗೊತ್ತಿರುವುದಿಲ್ಲ. ಗೊತ್ತಿಲ್ಲಂತ ಕೂಡ ಗೊತ್ತಿರುವುದಿಲ್ಲ. ಅವರು ಮೂರ್ಖರು. ಅವರಿಂದ ದೂರವಿದು. ಇನ್ನು ಕೆಲವರಿಗೆ ಗೊತ್ತಿರುತ್ತೆ. ಆದರೆ ಗೊತ್ತಿರುತ್ತೆ ಅಂತ ಗೊತ್ತಿರೋಲ್ಲ. ಅಂಥವರು ನಿದ್ರೆಯಲ್ಲಿ ಇರುತ್ತಾರೆ, ಅಂಥವರನ್ನು ಎಚ್ಚರಿಸಬೇಕು. ಮತ್ತೆ ಕೆಲವರಿಗೆ ಗೊತ್ತಿರುತ್ತೆ. ತಮಗೆ ಗೊತ್ತಿದೆಯೆಂದು ಅಂಥವರು ವಿವೇಕಿಗಳು. ಅವರನ್ನ ಅರಸಿಕೊಂಡು ಹೋಗಬೇಕು.
ಇವು ಚೀನಿ ಜ್ಞಾನಿ ಕನ್ಪ್ಯೂಶಿಯಸ್ ಹೇಳಿದ ಮಾತುಗಳು.