ಪ್ರೀತಿ-ಪ್ರೇಮ ಈ ಜಗತ್ತಿನ ಬೆಚ್ಚಗಿನ ಭಾವ ಎನ್ನುವುದರಲ್ಲಿ ಯಾರ ಭಿನ್ನಾಭಿಪ್ರಾಯವು ಇರದು! ಅದೊಂದು ಅನುಭೂತಿ. ಅದನ್ನೆ ಕವಿಗಳು, ಸಾಹಿತಿಗಳು ತೀರಾ ವೈಭವಿಕರಿಸಿದರೂ ಅದು ಪೂರಾ ಸುಳ್ಳೇನು ಅಲ್ಲ.
'ಬಾಡದ ಹೂ' ಆಗಿನ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾದಾಗ ಓದುಗರಲ್ಲಿ ಒಂದು ರೀತಿಯ ಸಂಚಲನ. ಲೇಖಕಿಯ ಮೊಲದ ಕಾದಂಬರಿಗೆ ಇಂಥ ಅದ್ಭುತ ಸ್ವಾಗತ. ವ್ಯವಸ್ಥಾಪಕ ಸಂಪಾದಕರಾದ ಮ.ನ. ಮೂರ್ತಿಗಳು ಓದುಗರ ಮೆಚ್ಚಿಗೆ ಪೂರದ ಪತ್ರಗಳ ರಾಶಿಯನ್ನು ಮುಂದೆ ಹಾಕಿದ್ದರು.
ಅಂದಿನ ಓದುಗರ ಮೆಚ್ಚಿಗೆಯೇ ಇಂದು ಉಳಿಸಿಕೊಂಡು ಹನ್ನೊಂದನೆ ಬಾರಿ ಅಚ್ಚಾಗಿದೆ. ಬೆಳ್ಳೆ ತೆರೆಯಲ್ಲು ಮಿನುಗಿದ 'ಬಾಡದ ಹೂ' ಯಶಸ್ಸನ್ನು ಚಲನಚಿತ್ರ ರಸಿಕರ ಪ್ರಶಸ್ತಿಯನ್ನು ಗಳಿಸಿಕೊಟ್ಟಿತ್ತು.
ಇಂಥ 'ಬಾಡದ ಹೂ' ಕಾದಂಬರಿಯನ್ನು ನಮ್ಮ ಪ್ರಕಾಶನದ ಮೂಲಕ ಅಚ್ಚು ಮಾಡುತ್ತಿರುವುದು ಅತ್ಯಂತ ಸಂತೋಷದ ವಿಷಯ.