ಸಾರಾಂಶ

ಗಂಡನಿಂದ ಕಿರುಕುಳಕ್ಕೆ ಒಳಗಾದ ಸ್ತ್ರೀಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಮಾಧ್ಯಮಗಳಲ್ಲಿ ನಿರಂತರವಾಗಿ ಚರ್ಚೆಗಳಾಗುತ್ತಿರುತ್ತೆ. ನಲುಗುವ ನೂರಾರು ಸ್ತ್ರೀಯರು ಇದ್ದಾರೆ. ಅವರ ಪರ ಖಂಡಿತ. ಸಮಾಜದ ಸಹಾನೂಭೂತಿ ಇದೆ. ಆ ಬಗ್ಗೆ ಕಾಯ್ದ ಕಾನೂನುಗಳು ಇವೆ.
ಜೊತೆಗೆ ಹೆಣ್ಣಿನಿಂದ ಹೆಣ್ಣು ಶೋಷಣೆಗೆ ಒಳಗಾಗುತ್ತಿರುವುದು ನಾವು ಕಾಣುತ್ತಿದ್ದೇವೆ. ಅತ್ತೆ, ಸೊಸೆ, ನಾದಿನಿ, ಅತ್ತಿಗೆ, ಜೊತೆಗೆ ಗಂಡ, ಗೆಂಡತಿಯ ಮದ್ಯೆ ಬೇರೊಂದು ಹೆಣ್ಣಿನ ಪ್ರವೇಶ. ಹೆಣ್ಣಿನ ಶೋಷಣೆಯಲ್ಲಿ ಹೆಣ್ಣೇ ಪ್ರಬಲ ಪಾತ್ರವಾಗುತ್ತಾಳೆ.
ಈಚೆಗೆ ಯಾರೋ ಒಬ್ಬರು ಶ್ರೀ ವಿ.ಕೆ. ದಿವಾನ್ ಎಂಬ ವಕೀಲರು 'Cruelty offences against Husbands' ಬರೆದಿರುವ ಗಂಡದಿರ ವಿರುದ್ಧ ಕ್ರೌರ್ಯ ಮತ್ತು ಅಪರಾಧಗಳು ಈ ಪುಸ್ತಕವನ್ನು ಎಲ್ಲರು ಒಮ್ಮೆ ಓದಿ ನೋಡಬೇಕೆಂಬ ವಿನಂತಿ ಮಾಡಿದ್ದರು.
ಈಚೆಗೆ ಗಂಡಸರು ಕೂಡ ಹೆಂಗಸರಿಂದ ಹಿಂಸೆಗೆ ಅಂದರೆ ಮಾನಸಿಕ ಹಿಂಸೆಗೆ ಒಳಗಾಗುತ್ತಿದ್ದಾರೆ. ಎನ್ನುವುದನ್ನು ಬಹಳಷ್ಟು ಪ್ರಕರಣಗಳನ್ನು ಉದಾಹರಣೆಯಾಗಿ ಕೊಟ್ಟು ಪ್ರಸ್ತುತಪಡಿಸಿದ್ದಾರೆ.
ದೈಹಿಕ ಹಿಂಸೆ ಕಣ್ಣಿಗೆ ಕಾಣಾಗುತ್ತೆ. ಆದರೆ... ಮಾನಸಿಕ ಹಿಂಸೆ ಹಿಂಸೆ....ಹಿಂಸೆಯೇ!
ಅಂಜಲಿ ಅಂಥವರ ಬಗ್ಗೆ ಏನು ಹೇಳೋಣ?

ಬೆಳಕಿನ ಹಣತೆ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
2002
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
144
ಬೆಲೆ:
95 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು