ಸಾರಾಂಶ

ಪ್ರೇಮ, ಪ್ರೀತಿಯ ಬಗ್ಗೆ ಕಾದಂಬರಿಯ ಒಂದು ಪಾತ್ರವಾದ ನಂದಿತಾ ಮಾಡುವ ವ್ಯಾಖ್ಯಾನ: ಅಪ್ಪ, ನಿಜ್ವಾಗೂ ನಂಗೆ ನಿನ್ನ ಚಿಕ್ಕಂದಿನ ಸ್ನೇಹಿತೆಯಾದ ಭವಾನಿಯನ್ನು ನೋಡಿ ಸಂತೋಷವಾಯ್ತು. ಆಕೆ ಸ್ನೇಹದ ಕಡಲು, ಕಲ್ಮಷ ರಹಿತ. ಐ ಲೈಕ್ ಹರ್, ಫೆಂಟಾಸ್ಟಿಕ್ ವುಮೆನ್. ಇರುಳ ದಿನಗಳಲ್ಲಿ ಆ ದಿನಗಳನ್ನು ನೆನೆಸಿಕೊಳ್ಳುವುದೇ ಒಂದು ಯೋಗ. ಅನಾರ್ಕಲಿ ಚಿತ್ರದ 'ಯೆ ಜಿಂದಗಿ ಉಸಿಕೇ ಹೈ ಜೋ ಕೀ ಹೋ ಗಯಾ' ಹಾಡನ್ನು ನೀವು ಗುನುಗಿದ್ದು ಕೇಳಿದ್ದಿದೆ. ಕೆಲವು ನೆನಪುಗಳು ಅತ್ಯಂತ ಸುಂದರ. ವರ್ಷಗಳ ಹಿಂದೆ ಚಿತ್ರಿತವಾದ ಪ್ರೇಮ ಗೀತೆ ಇಂದಿಗೂ ನವಿರಾಗಿ ಯುವ ಜನರ ಕನಸುಗಳನ್ನು ಕೆದಕುತ್ತೆ.
ಅದೇ ಆಧ್ಯಾತ್ಮಿಕವಾಗಿ ಗುರುತಿಸಲ್ಪಡುವ ಮೀರಾ ತನ್ನ ಪ್ರೇಮವನ್ನು ಕೃಷ್ಣನಿಗೆ ಅರ್ಪಿಸಿಕೊಳ್ಳುತ್ತ 'ಜೋಗಿಯಾಸೆ ಪ್ರೀತ್ ಕಿಯಾ, ಸುಖ್ ಹೋ... ದುಃಖ್ ಹೋ... ಮೀರಾ ಕೇ ಪ್ರಭು ಕಬ್ ರೇ ಮಿಲೋಗೆ' ಎಂದು ಭಕ್ತಿ ಪರವಶಳಾಗಿ ಹಾಡಿ ಅನನ್ಯ ಪ್ರೇಮದ
ಒಂದು ಅಗಾಧತೆಯನ್ನು ತೆರೆದಿಟ್ಟಿದ್ದಾಳೆ. ಅಂತೆಯೇ ಹನ್ನೆರಡನೆ ಶತಮಾನದ ಅಕ್ಕ ಮಹಾದೇವಿ ಚನ್ನಮಲ್ಲಿಕಾರ್ಜುನನ ಮೇಲಿಟ್ಟ ಪ್ರೀತಿ. ಆದರೆ ನಿಮ್ಮ ಚಿಕ್ಕಂದಿನ ಸ್ನೇಹಿತೆ ಭವಾನಿಯ ಪ್ರೇಮಕ್ಕೆ ಬೇರೊಂದು ವ್ಯಾಖ್ಯಾನ ಬರೆಯಬೇಕಿದೆ ಎಂದಳು ನಂದಿತಾ ಮತ್ತೆ.
ಇಂಥ ಪ್ರೇಮದ ಅನುಭವಗಳು ನಿಮಗೂ ಇರಬಹುದೆ, ನೂರಕ್ಕೆ ನೂರರಷ್ಟು ನಿಜ ಎಂದು ಕೆಲವು ಓದುಗರ ಅನಿಸಿಕೆ.

ಚಿರಂತನ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
2007
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
252
ಬೆಲೆ:
195 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು