ಸಾರಾಂಶ

ಎಲ್ಲಿಂದ.... ಎಲ್ಲಿಗೆ? ಪೈಸೆಗೆ ಪರದಾಡುತ್ತಿದ್ದ ಚಾಮಿ ಈಗ ಕೋಟಿಗಳಿಗೆ ಒಡೆಯ. ಈಗ ಕಾಳಿ, ಸಿಂಧು, ಪಂಚಮಿ ಇದ್ದಿದ್ದರೇ? ಆದು ಬರೀ ಕನಸು. ಮುಂದೆ ಅಂಥ ಕನಸು ಕೂಡ ಬೀಳಲಾರದು.
ಹತ್ತು ವರ್ಷ ತರದ ಮಾನಸಿಕ ಬದಲಾವಣೆ ಈ ಹತ್ತು ದಿನಗಳಲ್ಲಿ ಕಂಡ ಈ ಬದುಕಿನ ವಿಶ್ವರೂಪ ದರ್ಶನದಿಂದ 'ಚಾಮಿ' ಬೆಳೆದಿದ್ದ. ಬದಲಾಗಿದ್ದ. ಇಷ್ಟು ದಿನ ಅವನು ಬದುಕಿದ್ದು ಭ್ರಮೆಯಲ್ಲಿ. ಜೀವನದ ಮುಗಿಲು-ಅಂಚುಗಳ ನಡುವೆ ಇದ್ದ ವಿಸ್ಮಯಕಾರಿ, ಚೇತೋಹಾರಿ, ಆಂದೋಲನಕಾರಿಯಾದ ಜಗತ್ತು ಸಂದಿಗ್ಧ ಜಿಜ್ಞಾಸೆಗಳ ನಡುವೆ ಅಡಗಿದೆಯೆನಿಸಿತು..
'ಪರಿಶ್ರಮ ಮೆಟ್ಟಲಿನಂತೆ. ಅದೃಷ್ಟ ಲಿಫ್ಟ್ನಂತೆ, ಅದೃಷ್ಟ ಕೈ ಕೊಡಬಹುದು. ಆದರೆ ಮೆಟ್ಟಲು ನಿಮ್ಮನ್ನ ಶಿಖರಕ್ಕೆ ಕೊಂಡೊಯ್ಯಬಲ್ಲದು'. ಇದು ನಮ್ಮ ಹೆಮ್ಮೆಯ ರಾಷ್ಟ್ರಪತಿಗಳಾಗಿದ್ದ ಡಾ|| ಅಬ್ದುಲ್ ಕಲಾಂ ಅವರ ಮಾತುಗಳು.
ಆ ರೀತಿಯಿಂದಲೇ ಚಾಮಿ ಮೇಲೇರಿದ್ದ.
ಆದರೆ 'ದಂತದ ಗೊಂಬೆ' ಬರೀ ನೆನಪು.

ದಂತದಗೊಂಬೆ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1997
ರಕ್ಷಾಪುಟ:
ಪ.ಸ. ಕುಮಾರ್
ಪುಟಗಳು:
130
ಬೆಲೆ:
85 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು