ಸಾರಾಂಶ

ಯಾವ ಸಮಾಜದಲ್ಲಿ ಮನುಷ್ಯ ಸಂಬಂಧಗಳು ಗಟ್ಟಿಯಾಗಿರುತ್ತದೆಯೋ ಆ ಸಮಾಜ ಅತ್ಯಂತ ಆರೋಗ್ಯಕರ, ಅಷ್ಟೆ ಸನ್ನಡತೆ ಕೂಡ. ಸಂಬಂಧಗಳು ಹೇಗೆ ಹುಟ್ಟುತ್ತದೆ, ಹೇಗೆ ಕೊನೆಗೊಳ್ಳುತ್ತವೆಯೆಂದು ಹೇಳಲಾಗುವುದಿಲ್ಲ. ಇದೊಂದು ರೀತಿಯಲ್ಲಿ ಬೀಜ ಮೊಳಕೆಯೊಡೆದು, ಭೂಮಿಯಾಳಕ್ಕೆ ಬೇರು ಬಿಟ್ಟು ತಲೆ ಎತ್ತಿ ನಿಲ್ಲುವ ಗಿಡದಂತೆ.
ತನ್ನ ಸಂಬಂಧ, ಪರಿಚಯವನ್ನ ಬಹಳ ಸರಳವಾಗಿ ಹೇಳಿದ ಶ್ರೀಕಾಂತ್ ಶಶಿಕಾಂತ್ ನಿಶಾಂತ್- ಬಾಪಟ್ ಆಚಾರ್ಯ.
"ಹಲೋ ಮಹೇಂದ್ರ... ಸಸ್ಪೆನ್ಸ್ ಬಗ್ಗೆ ಕೇಳಿದ್ರಲ್ಲ, ಇನ್ನೊಂದು ಥ್ರಿಲ್ ಇದೆ. ರೋಹಿಣಿ ನನ್ನ ಲೈಫ್ ಪಾರ್ಟನರ್. 'ದಿ ಭಾರತ್' ಪತ್ರಿಕೆಯ ಎಡಿಟರ್, ಪಬ್ಲಿಷರ್ ಶ್ರೀಕಾಂತ್ ಶಶಿಕಾಂತ್ ನಿಶಾಂತ್- ಬಾಪಟ್ ಆಚಾರ್ಯ ನಾನು. ನನ್ನ ತಂದೆಯ ಪರಿಚಯ ನಿನ್ನ ತಂದೆಗೆ ಇರುತ್ತೆ. ವಿಚಾರ್ಸು. ಪರಶುರಾಮ್ನಿಂದ ಸಹಾಯ ಪಡೆದ ನಿನ್ತಂದೆ ರಾಜಕೀಯಕ್ಕೆ ಇಳಿದರು. ನನ್ನ ತಂದೆ ಪತ್ರಿಕೆ ಆರಂಭಿಸಿದರು. ದಟ್ಸ್.... ಆಲ್....,? ದಿಗ್ಭ್ರಾಂತನಾಗಿ ನಿಂತ ಮಹೇಂದ್ರನ ಕೈಯನ್ನು ತಾನೇ ಕುಲುಕಿದ.
"ಧವಳ ನಕ್ಷತ್ರ" ಹೀಗೆಯೇ ಇರುತ್ತೆ. ಆಗಾಗ ಬರೋಣ ರೋಹಿಣಿಯನ್ನು ಸಂತೈಯಿಸಿದ.

ಧವಳ ನಕ್ಷತ್ರ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1990
ರಕ್ಷಾಪುಟ:
ಪ.ಸ. ಕುಮಾರ್
ಪುಟಗಳು:
150
ಬೆಲೆ:
100 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು