ವಸಂತ ಪ್ರಕಾಶನ ಕಳೆದ ೨೫ ವರುಷಗಳಿಂದ ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತಾ ಬಂದಿದೆ. ಎಲ್ಲ ಬಗೆಯ ಪುಸ್ತಕಗಳನ್ನೂ ಪ್ರಕಟಿಸುವ ನಮ್ಮ ಪ್ರಕಾಶನ ಈವರೆಗೆ ೧೨೦೦ ಪುಸ್ತಕಗಳನ್ನು ಪ್ರಕಾಶಿಸಿದೆ. ನೀವೂ ಬರಹಗಾರರೆ? ನಿಮ್ಮ ಹೊಸ ಪುಸ್ತಕವನ್ನು ನಮ್ಮ ಸಂಸ್ಥೆಯಿಂದ ಪ್ರಕಾಶಿಸಬಯಸುವಿರಾ? ನಿಮ್ಮ ಪ್ರಶ್ನೆ, ಅನುಮಾನಗಳಿಗೆ ಈ ಕೆಳಗೆ ಉತ್ತರಿಸಲು ಪ್ರಯತ್ನಿಸಿದ್ದೇವೆ. ಈ ನಿಯಮಗಳು ಹೊಸ ಬರಹಗಾರರಿಗೆ ಅನ್ವಯಿಸುತ್ತವೆ. ಹಿರಿಯ ಲೇಖಕರು ಅಥವಾ ಯಾವುದೇ ರಂಗದ ಹಿರಿಯ ಸಾಧಕರು ಪುಸ್ತಕ ಪ್ರಕಟಿಸಬಯಸಿದಲ್ಲಿ ನಮ್ಮನ್ನು ನೇರವಾಗಿ ಸಂಪರ್ಕಿಸಬಹುದು.

೧ ಯಾವ ರೀತಿಯ ಪುಸ್ತಕಗಳನ್ನು ವಸಂತ ಪ್ರಕಾಶನ ಪ್ರಕಟಿಸುತ್ತದೆ?

ವಸಂತ ಎಲ್ಲ ಬಗೆಯ ಉತ್ತಮ ಬರವಣಿಗೆಯನ್ನು ಪ್ರಕಟಿಸಲು ಬಯಸುತ್ತದೆ. ಆದರೂ ಕಾದಂಬರಿ, ಆತ್ಮಚರಿತ್ತೆ, ಜೀವನಚರಿತ್ತೆ, ವ್ಯಕ್ತಿತ್ವ ವಿಕಸನ, ಮಕ್ಕಳ ಪುಸ್ತಕಗಳು, ಪ್ರವಾಸ ಕಥನಗಳಿಗೆ ನಮ್ಮ ಆದ್ಯತೆ.

೨ ಹಸ್ತಪ್ರತಿ ಸಿದ್ಧವಾಗಿದೆ. ಈಗ ಏನು ಮಾಡಬೇಕು?

ಮೊದಲು ಈ ಕೆಳಗಿನವನ್ನು ನಮಗೆ ಕಳಿಸಿ: ಎರಡು ಪುಟ ಅಥವಾ ಸುಮಾರು ೭೦೦ ಪದಗಳ ಮಿತಿಯೊಳಗೆ ನಿಮ್ಮ ಕೃತಿಯ ಸಾರಾಂಶ ನಾಲ್ಕುಪುಟ ಅಥವಾ ಸುಮಾರು ೧೫೦೦ ಪದಗಳ ಮಿತಿಯೊಳಗೆ ಕೃತಿಯೊಳಗಿನ ಅಧ್ಯಾಯಗಳ ಬಗ್ಗೆ ವಿವರ. ಕಾದಂಬರಿಯಾದರೆ ಮೊದಲ ಮೂರು ಅಧ್ಯಾಯಗಳನ್ನು ಕಳಿಸಿರಿ. ಕಥಾಸಂಗ್ರಹವಾದರೆ ೩ ಕತೆಗಳನ್ನು ಕಳಿಸಿರಿ. ಜತೆಗೆ ನಿಮ್ಮ ಬಗ್ಗೆ ಒಂದು ಪುಟದ ಪರಿಚಯ. ಈ ಮೊದಲು ಪುಸ್ತಕ ಪ್ರಕಟವಾಗಿದ್ದರೆ ಅದರ ವಿವರಗಳು. ಬರವಣಿಗೆಯಲ್ಲಿ ನಿಮಗಿರುವ ಅನುಭವದ ವಿವರಗಳು ಇರಲಿ.

೩ ಯಾವ ಫಾರ್ಮಾಟ್ ಯಾವ ಫಾಂಟ್?

ಮೇಲಿನ ಎಲ್ಲವನ್ನೂ ಮೈಕ್ರೋಸಾಫ್ಟ್ ವರ್ಡ್ ಡಾಕುಮೆಂಟ್‌ನಲ್ಲಿ ನಮಗೆ ಕಳಿಸಬೇಕು. ಬರಹ ಅಥವಾ ನುಡಿ ಫಾಂಟ್‌ನಲ್ಲಿ ಇರುವುದು ಅಗತ್ಯ. ನಿಮ್ಮ ಹೆಸರು ಮತ್ತು ಸಂಪರ್ಕ ವಿವರಗಳನ್ನು ಮೊದಲ ಪುಟದಲ್ಲೇ ಸ್ಪಷ್ಟವಾಗಿ ನಮೂದಿಸಿ. ಈ ನಿಯಮಗಳನ್ನು ಪಾಲಿಸದಿದ್ದರೆ ನಿಮ್ಮ ಕೃತಿಯನ್ನು ಪ್ರಕಟಣೆಗೆ ಪರಿಗಣಿಸಲಾಗದು

೪ ಹೇಗೆ ಕಳಿಸುವುದು?

vasantaprakashana@yahoo.com ಗೆ ಇ ಮೇಲ್ ಮಾಡಿ. ಅಥವಾ ನಮ್ಮ ವಿಳಾಸಕ್ಕೆ ಸಿಡಿ ಕಳಿಸಿ.

೫ ಆನಂತರ ಏನಾಗುತ್ತೆ?

ಒಂದು ತಿಂಗಳ ಅವಧಿಯೊಳಗೆ ನಮ್ಮ ನಿರ್ಧಾರ ತಿಳಿಸಲಾಗುವುದು. ಒಂದುವೇಳೆ ಒಂದು ತಿಂಗಳ ನಂತರವೂ ನಮ್ಮಿಂದ ಪ್ರತಿಕ್ರಿಯೆ ಬಾರದಿದ್ದರೆ ದಯವಿಟ್ಟು ಒಂದು ಮೇಲ್ ಮಾಡಿ ನೆನಪಿಸಿ. ನೀವು ಕಳಿಸಿದ ಬರಹ ನಮಗೆ ಇಷ್ಟವಾದಲ್ಲಿ ಪೂರ್ಣ ಹಸ್ತಪ್ರತಿಯನ್ನು ಕಳಿಸಲು ತಿಳಿಸುತ್ತೇವೆ. ನಾವು ಕೇಳುವ ಮೊದಲು ಪೂರ್ಣ ಹಸ್ತಪ್ರತಿ ಕಳಿಸುವುದು ಬೇಡ. ನಾವು ನಿಮ್ಮಿಂದ ಪೂರ್ಣ ಹಸ್ತಪ್ರತಿಯನ್ನು ತರಿಸಿಕೊಂಡಲ್ಲಿ ನಂತರದ ಒಂದು ತಿಂಗಳಲ್ಲಿ ಪ್ರಕಟಣೆಗೆ ಸ್ವೀಕರಿಸಲಾಗಿದೆಯೋ ಇಲ್ಲವೋ ಎಂಬ ನಿರ್ಧಾರವನ್ನು ತಿಳಿಸಲಾಗುವು.

೬ ಖುದ್ದಾಗಿ ನಿಮ್ಮ ಕಚೇರಿಗೆ ಬಂದು ನನ್ನ ಹಸ್ತಪ್ರತಿ ಬಗ್ಗೆ ಚರ್ಚಿಸಬಹುದೆ?

ಕ್ಷಮಿಸಿ. ಸಾಧ್ಯವಿಲ್ಲ. ತುಂಬಾ ಹಸ್ತಪ್ರತಿಗಳು ಹಾಗೂ ಅವುಗಳ ಮೌಲ್ಯಮಾಪನಕ್ಕೆ ಕಡಿಮೆ ಜನಸಂಪನ್ಮೂಲ ಇರುವ ಕಾರಣ ನಿಮ್ಮಫೋನ್ ವಿಚಾರಣೆಯನ್ನು ಸಹ ನಾವು ಪ್ರೋತ್ಸಾಹಿಸುವುದಿಲ್ಲ. ನಿಮ್ಮ ಹಸ್ತಪ್ರತಿ ಇಷ್ಟವಾದರೆ ನಾವೇ ನಿಮ್ಮನ್ನು ಸಂಪರ್ಕಿಸುತ್ತೇವೆ.

೭ ಎಷ್ಟು ಪ್ರತಿ ಮುದ್ರಿಸುತ್ತೀರಿ? ಎಷ್ಟು ರಾಯಲ್ಟಿ ಕೊಡುತ್ತೀರಿ? ಬಿಡುಗಡೆ ಕಾರ್ಯಕ್ರಮ ಎಲ್ಲಿ ಮಾಡ್ತೀರ?

ಹಸ್ತಪ್ರತಿ ಪ್ರಕಟಣೆಗೆ ಸ್ವೀಕಾರಗೊಂಡ ನಂತರವಷ್ಟೇ ನಿಮ್ಮೊಂದಿಗೆ ಚರ್ಚಿಸಿ ಈ ಎಲ್ಲಕ್ಕೂ ಸಂಬಂಧಿಸಿದಂತೆ ಅಗ್ರಿಮೆಂಟ್ ಮಾಡಿಕೊಳ್ಳಲಾಗುವುದು.

೮ ನಿಮಗೆ ಕಳಿಸಿದ ಹಸ್ತಪ್ರತಿಯನ್ನು ಬೇರೆ ಪ್ರಕಾಶಕರಿಗೂ ಕಳಿಸಬಹುದೆ?

ಕಳಿಸಿ ಪರವಾಗಿಲ್ಲ. ಆದರೆ ಬೇರೆ ಪ್ರಕಾಶಕರು ಪ್ರಕಟಿಸಲು ಒಪ್ಪಿದಲ್ಲಿ ನಮಗೆ ವಿಷಯ ತಿಳಿಸಿ.