ಸಾರಾಂಶ

ಬಹುರಹಸ್ಯವೋ, ಬಹುರಹಸ್ಯವೋ ಜೀವ |
ಅಹುದದಲ್ಲವಿದೆಂಬ ವಾದ ಖರಿ ಹರಟೆ ||
ಗುಹೆಯೊಳಿಹುದಲ್ಲ ತತ್ತ್ವಗಳ ತತ್ವರ ಮೂಲ |
ಬಹಿರಂತರ ರಹಸ್ಯ - ಮಂಕುತಿಮ್ಮ |
ಪೂಜ್ಯ ಡಿ.ವಿ.ಜಿ.ಯವರ ಪದ್ಯ ಎಷ್ಟೊಂದು ಅರ್ಥಪೂರ್ಣ ಜೀವನ ಏನೆಂದು ವಿಶ್ಲೇಷಿಸಿಕೊಳ್ಳಲಾಗದ ರಹಸ್ಯ, ಜೊತೆಗೆ ಎಲ್ಲಾ ತಿಳಿದಿದೆಯೆನ್ನುವ ಅಹಂಕಾರ.
ಬದುಕಿನ ಬಗ್ಗೆ ಕಡೆಂಗೋಡ್ಲು ಶಂಕರಭಟ್ಟರು ಹೀಗೆ ಹೇಳಿದ್ದಾರೆ 'ನದಿಯ ನೀರು ಹರಿದಂತೆ ಜೀವನದ ನದಿಯು ಹರಿಯುತ್ತದೆ. ಹೀಗೆ ಹರಿಯುವಾಗ ಏನೇನೋ ಅನುಭವಗಳನ್ನು ಹೊತ್ತು ತರುತ್ತದೆ. ಆಯ್ಕೆ ಮಾಡುವ ಸ್ವತಂತ್ರ ಯಾರಿಗೂ ಇಲ್ಲ. ಬದುಕನ್ನ ಇದ್ದದ್ದು ಇದ್ದಂತೆ ಸ್ವೀಕರಿಸುವುದು ಸಹಜ ಧರ್ಮ'.
'ನಿಮಿತ್ತ ಮಾತ್ರಂ ಭವ ಸವ್ಯಸಾಚಿನ್' ಎಂದು ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ. ವಿಧಿ ಒಂದೊಂದು ಕೆಲಸವನ್ನು ಮಾಡಿಸಲು ಒಬ್ಬೊಬ್ಬರನ್ನು ಉಪಕರಣವಾಗಿ ಬಳಸಿಕೊಳ್ಳುತ್ತೆ. ಇಲ್ಲಿ ನಾವು, ನೀವು ಎಲ್ಲಾ 'ಉಪಕರಣ'ಗಳು, 'ಗಂಧರ್ವಗಿರಿ'ಯಲ್ಲಿ ಎಲ್ಲರೂ ದೇವರ ಕೈನ ಉಪಕರಣ'ಗಳಾಗಿದ್ದಾರೆ.

ಗಂಧರ್ವಗಿರಿ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/4 ಕ್ರೌನ್
ಮುದ್ರಣ:
1980
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
160
ಬೆಲೆ:
80 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು