ಸಾರಾಂಶ

ಮನುಷ್ಯನ ಮುಖ ಕನ್ನಡಿಯಲ್ಲಿ ಪ್ರತಿಬಿಂಬಿತವಾದರೆ ಅವನ ಅನೇಕ ಸ್ವಭಾವಗಳು ಅವನ ಕೈ ಬರಹದಲ್ಲಿ ಪ್ರಕಟಗೊಳ್ಳುತ್ತವೆ; ಅವನ ಧಾವಂತ, ತಾಳ್ಮೆ, ಸಿದ್ಧತೆ, ಯೋಚಿಸುವ ಧಾಟಿ, ಮುಂತಾದವು ಹೊರಹೊಮ್ಮುತ್ತವೆ. ಇದನ್ನೆಲ್ಲ ತಿಳಿಸಿಕೊಡುವ ಹೆಸರಾಂತ ಲೇಖಕ ಯಂಡಮೂರಿ ವೀರೇಂದ್ರನಾಥರ 'ಗ್ರಾಫಾಲಜಿ' ಹೊಸದಾಗಿ ಗ್ರಾಫಾಲಜಿ ಕಲಿಯಬಯಸುವವರಿಗೆ, ತಮ್ಮ ಕೈ ಬರಹವನ್ನು ತಾವೇ ವಿಶ್ಲೇಷಣೆ ಮಾಡಿಕೊಳ್ಳ ಬಯಸುವವರಿಗೆ ಹಾಗೂ ಇತರರ ಮನಃಸತ್ವವನ್ನು ಅರಿಯ ಬಯಸುವವರಿಗೆ ಅತ್ಯುಪಯುಕ್ತ ಕೃತಿ. ಎಡಗಡೆಗೆ ಬರೆಯುವವರು, ಬಲಗಡೆಗೆ ಬರೆಯುವವರು, ಡೂಡ್ಲಿಂಗ್, ಇಂಕಿನ ಬಣ್ಣದ ಆಯ್ಕೆ, ಒತ್ತಕ್ಷರಗಳು, ಪ್ಯಾರಾಗ್ರಾಫ್ಗಳು, ಮಕ್ಕಳ ಕೈ ಬರಹ, ಬಿಡುವ ಮಾರ್ಜಿನ್, ಅಕ್ಷರಗಳ ಜೋಡಣೆ, ಇಂತಹ ಅನೇಕ ವಿಷಯಗಳನ್ನು ಕೃತಿ ಒಳಗೊಂಡಿದೆ. ಇದನ್ನು ಖ್ಯಾತ ಬರಹಗಾರ ರಾಜಾ ಚೆಂಡೂರ್ ಕನ್ನಡಕ್ಕೆ ಸೊಗಸಾಗಿ ತಂದಿದ್ದಾರೆ. ಇದೊಂದು ವಿನೂತನ ಹಾಗೂ ಸಂಗ್ರಹಯೋಗ್ಯ ಕೃತಿಯಾಗಿದೆ.

ಗ್ರಾಫಾಲಜಿ
ಲೇಖಕರು:
ಯಂಡಮೂರಿ ವೀರೇಂದ್ರನಾಥ್
ಅನುವಾದಕರು :
ರಾಜಾ ಚೆಂಡೂರ್
ಪ್ರಕಾರ:
ಇತರೆ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
2002
ರಕ್ಷಾಪುಟ:
---
ಪುಟಗಳು:
138
ಬೆಲೆ:
85 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು