ಸಾರಾಂಶ

ಜೀವನದ ಜಂಜಾಟದಲ್ಲಿ ನಮಗೆ ದಾರಿದೀಪವಾಗುವಂಥ ಜನ ಇದ್ದಾರೆ. ಹಾಗೆಯೇ ಮೋಸ ಮಾಡುವವರಿದ್ದಾರೆ. ಔದಾರ್ಯದ ಉರುಳಲ್ಲಿ ನಮ್ಮನ್ನ ಸಿಕ್ಕಿಸಿ ತಮಾಷೆ ನೋಡುವಂಥವರು ಇದ್ದಾರೆ. ಕೃತಘ್ನರಿದ್ದಾರೆ. ಒಳ್ಳೆಯವರಂತೆ ನಟಿಸಿ ಪ್ರಪಾತದ ಅಂಚಿಗೆ ದೂಡುವಂಥ ಜನ ಕೂಡ ಇದ್ದಾರೆ. ಜೀವನದ ನಮ್ಮ ನಡಿಗೆ ಎತ್ತಲೋ ಸಾಗಿ, ಎಲ್ಲಿಯೋ ಮುಗಿಯುತ್ತದೆ. ನಮಗರಿಯದ ರಸ್ತೆಯಲ್ಲಿ, ತಿಳಿಯದ ಅಂಚಿಗೆ ತಲುಪುವುದು ಕೂಡ ಸುಳ್ಳಲ್ಲ. ಒಟ್ಟಿನಲ್ಲಿ ಈ ಜೀವನ ವಿಸ್ಮಯದ ಮೂಟೆ.
ಆದರೆ ಇವೆಲ್ಲದರ ನಡುವೆ ಪ್ರಕೃತಿ ತನ್ನ ಒಡಲಲ್ಲಿ ಸಾಕಷ್ಟು ಅದ್ಭುತಗಳನ್ನ ಬಚ್ಚಿಟ್ಟುಕೊಂಡಿದೆ. ಮಂದವಾದ ಮಲಯ ಮಾರುತ, ಕೋಗಿಲೆಯ ಇಂಪಿನ ಗಾನ, ನವಿಲಿನ ನರ್ತನ, ಸುತ್ತ ಹಸುರಿನ ತಣ್ಣನೆಯ ಉಸುರಿನ ಸಿಂಚನ.
ಇವೆಲ್ಲದರ ನಡುವೆ ಋತು, ಡಾ| ಚಂದರ್ ಅಂಥವರು ಇದ್ದಾರೆ. ನೀವುಗಳು ಕೂಡ ಇಂಥವರನ್ನ ಕಂಡಿರಬಹುದು.

ಗ್ರೀಷ್ಮದ ಸೊಬಗು
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
2003
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
166
ಬೆಲೆ:
100 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು