ಸಾರಾಂಶ

ರೇಲ್ವೆ ರಾಜು' ಎಂದೆ ಪ್ರಸಿದ್ಧನಾದ ಒಬ್ಬ ನಿರಪಾಯಿ ಯುವಕನ ಕಥೆ ಇದು. ಯಾವ ಪೂರ್ವ ತಯ್ಯಾರಿಯೂ ಇರದೆ ಬದುಕನ್ನು ಅದು ಬಿಚ್ಚಿಕೊಂಡಂತೆ ಅದಕ್ಕೆ ತನ್ನನ್ನು ಒಡ್ಡಿಕೊಳ್ಳುತ್ತ ಹೋಗುವ ರಾಜು ಅಚಾನಕ್ ಆಗಿ ಸುಂದರ ನರ್ತಕಿ ರೋಸಿಯಿಂದ ಆಕರ್ಷಿತನಾಗುವನು. ಅವಳು ತನ್ನ ಸಂಶೋಧಕ ಪತಿಯಿಂದ ದೂರವಾಗುವದಕ್ಕೂ ಕಾರಣನಾಗುವನು. ಸಹಜ ಪ್ರತಿಭೆಯ ರೋಸಿಯನ್ನು ತನ್ನ ಪರಿಶ್ರಮದಿಂದ ಒಬ್ಬ ದೊಡ್ಡ ನರ್ತಕಿಯನ್ನಾಗಿ ಮಾಡುತ್ತಾನೆ. ಅವಳೊಂದಿಗೆ ತಾನೂ ಪ್ರಸಿದ್ಧಿ ಮತ್ತು ಸಂಪತ್ತನ್ನು ಸಂಪಾದಿಸುತ್ತಾನೆ. ಸಂಪಾದಿಸುವದರ ಜೊತೆಗೆ ಸಾಕಷ್ಟು ಕಳೆದುಕೊಳ್ಳುತ್ತಾನೆ. ಜೈಲುವಾಸವನ್ನೂ ಅನುಭವಿಸುವನು. ಜೈಲಿನಿಂದ ಹೊರಬಂದ ಮೇಲೆ ವಿಚಿತ್ರ ಪರಿಸ್ಥಿತಿಗೆ ಪ್ರಜ್ಞಾಪೂರ್ವಕವಾಗಿ ಒಪ್ಪಿಸಿಕೊಳ್ಳುತ್ತ ಒಂದರ್ಥದಲ್ಲಿ 'ಸಂತ'ನಾಗಿ ಬಿಡುತ್ತಾನೆ.
ಹೀಗೆ 'ಗೈಡ್' ರಾಜುವಿನ ಏಳು-ಬೀಳುಗಳ ಇತಿಹಾಸ. ಈ ಇತಿಹಾಸದ ನಿಗೂಢತೆಯನ್ನು ಆರ್. ಕೆ. ನಾರಾಯಣ್ ಅವರು ತಮ್ಮ ನವಿರಾದ ಹಾಸ್ಯ ಶೈಲಿಯಲ್ಲಿ ಭೇದಿಸುತ್ತಾರೆ. ಇದರೊಂದಿಗೆ ಕೆಲ ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತಾರೆ.
ನೈದಿಲೆಯ ತರಹ The Guide ಭಾರತೀಯ ಸಮಾಜದ ಸರೋವರದ ಮೇಲೆ ತೇಲಿದರೂ, ಆ ಸಮಾಜದ ಉದ್ದಗಲಗಳನ್ನು ಭೇದಿಸುತ್ತದೆ. ಯಾವ ತಯ್ಯಾರಿಯೂ ಇರದೆ ಒಮ್ಮಿಂದೊಮ್ಮೆಲೆ 'ಸಂತ'ನಾದ ವ್ಯಕ್ತಿಯೊಬ್ಬನ ಬದುಕನ್ನು ಚಿತ್ರಿಸಿದೆ.

ಗೈಡ್
ಲೇಖಕರು:
ಆರ್ ಕೆ ನಾರಾಯಣ್
ಅನುವಾದಕರು :
ಪ್ರಮೋದ ಮುತಾಲಿಕ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಡೆಮಿ
ಮುದ್ರಣ:
2014
ರಕ್ಷಾಪುಟ:
---
ಪುಟಗಳು:
200
ಬೆಲೆ:
150 ರೂ.
ಲೇಖಕರ ಪರಿಚಯ
ಪ್ರೊ. ಪ್ರಮೋದ ಮುತಾಲಿಕ ಅವರು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರು. ಅನುವಾದ ಮತ್ತು ವಿಮರ್ಶೆ ಇವರ ಮುಖ್ಯ ಆಸಕ್ತಿ. ೧೯೯೮ರಲ್ಲಿ ಚಿನುವ ಅಚಿಬೆಯ ಥಿಂಗ್ಸ್ ಫಾಲ್ ಅಪಾರ್ಟ್ ಕಾದಂಬರಿ ಕಳಚಿದ ಕೊಂಡಿ ಹೆಸರಿನಲ್ಲಿ ಉತ್ತರ ಕರ್ನಾಟಕ ಉಪಭಾಷೆಯ ಸೊಗಡಿನೊಂದಿಗೆ ಅನುವಾದಗೊಂಡು ಪ್ರಕಟವಾಯ್ತು. ಜಗತ್ತಿನ ಕೆಲ ಶ್ರೇಷ್ಠ ಕತೆಗಳನ್ನು ಅನುವಾದಿಸಿ ಕಣಜ ಎಂಬ ಸಂಗ್ರಹವನ್ನು ಪ್ರಕಟಿಸಿದ್ದಾರೆ. ಇದಲ್ಲದೆ ಡಾ. ಎಚ್. ನರಸಿಂಹಯ್ಯನವರ ಆತ್ಮಕಥೆ ’ಹೋರಾಟದ ಹಾದಿ’ಯ ಇಂಗ್ಲಿಷ್ ಅನುವಾದ ಪ್ರಕಟಣೆಗೆ ಸಿದ್ಧವಾಗಿದೆ. ಸಾಹಿತ್ಯ ವಿಮರ್ಶೆಯ ಹಲವಾರು ಲೇಖನಗಳನ್ನು ಪ್ರಕಟಿಸಿದ್ದಾರೆ.