ಮನುಷ್ಯನ ಆಯಸ್ಸು ಎಷ್ಟು? ಅದರಲ್ಲಿ ಬದುಕಲು ಯೋಗ್ಯವಾಗಿರುವ ಕಾಲವೆಷ್ಟು? ಈ ಜಗತ್ತು ಎಷ್ಟು ವಿಶಾಲ, ಎಷ್ಟೊಂದು ವೈವಿಧ್ಯಮಯ; ಸಂಸ್ಕೃತಿ, ಅದ್ಭುತಗಳು, ವಿಸ್ಮಯಗಳೆಷ್ಟು? ಇಷ್ಟನ್ನೆಲ್ಲ ನೋಡಲು, ಅಭ್ಯಸಿಸಲು ತಿಳಿಯಲು ಎಷ್ಟು ಕಾಲ ಬೇಕು? ಎಂದು ಪ್ರಶ್ನಿಸುವ ಲಾವಣ್ಯ ಯಾರು?
ಅವಳು ಬಂದಿದ್ದು ಎಲ್ಲಿಂದ? ಹೋಗಿದ್ದು ಎಲ್ಲಿಗೆ? ಅವಳು ಬೆಳೆಸಿಕೊಂಡ ಮಾನವೀಯ ಸಂಬಂಧಕ್ಕೆ ಅರ್ಥವೇನು?
ಹಿಮಗಿರಿಯ 'ಗಿರಿನವಿಲು' ನಿಗೂಢವಾಗಿ ಜಗದೀಶ್ ಬದುಕಿನಲ್ಲಿ ಉಳಿದು ಹೋದಳು. ಏಕೆಂದರೆ ಬದುಕಿನ ರೋಮಾಂಚನ ಉಳಿಯುವುದು ಪ್ರಶ್ನೆಗಳಲ್ಲಿಯೇ ವಿನಃ ಉತ್ತರ ಪಡೆಯುವಲ್ಲಿ ಅಲ್ಲ.
ಹಿಮಗಿರಿಯ ಮೇಲೆ ಕುಳಿತ ಚೆಂದದ ನವಿಲು ಬದುಕಿಗೊಂದು ಅರ್ಥ ಬರೆದುಹೋಗಿದ್ದಾಳೆ.