ಓದುಗರು ಮನವನ್ನು ಕಾಡುವ, ರಂಜಿಸುವ, ವಿಶಿಷ್ಟ ಕಥಾವಸ್ತುಗಳನ್ನು ಒಳಗೊಂಡಿರುವ ಕಾದಂಬರಿಗಳನ್ನು ಬರೆದು ಅಪೂರ್ವ ಪ್ರತಿಭೆಯನ್ನು ತೋರಿರುವ ಖ್ಯಾತ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಸಣ್ಣ ಕಥೆಗಳ ರಚನೆಯಲ್ಲೂ ಸಿದ್ಧಹಸ್ತರೆಂದು ಈ ಕಥಾಸಂಕಲನದ ಕಥೆಗಳು ರುಜುವಾತು ಮಾಡುತ್ತವೆ. ಇಲ್ಲಿನ ಪ್ರತಿಯೊಂದು ಕಥೆಯೂ ಕಾದಂಬರಿಯೊಂದನ್ನು ಓದಿದ ದಟ್ಟ ಅನುಭವವನ್ನು ನೀಡುತ್ತವೆ: ವಿಶಿಷ್ಟ ಕಥಾವಸ್ತು, ಶೈಲಿಗಳಿಂದ ಓದುಗರನ್ನು ಹೊಸ ಲೋಕಕ್ಕೆ ಕರೆದೊಯ್ಯುತ್ತವೆ. ಹಿರಿಯ ಲೇಖಕ ರಾಜಾ ಚೆಂಡೂರ್ ಅವರು ಯಂಡಮೂರಿಯವರ ಪ್ರತಿಯೊಂದು ಪಿಸುಮಾತನ್ನೂ ಚಾಚೂ ತಪ್ಪದಂತೆ ಕನ್ನಡದ ಓದುಗರಿಗೆ ಕೇಳಿಸಿದ್ದಾರೆ.