ಪುಸ್ತಕದ ಬೆನ್ನುಡಿ :
'ಇಲ್ಲಿ ಶಾಶ್ವತವಾಗಿ ಬದುಕಲು ಪ್ರಯತ್ನಿಸಬೇಡಿ.
ನೀವು ಯಶಸ್ವಿಯಾಗಲಾರಿರಿ.'
-ಬರ್ನಾಡ್ ಷಾ
'ದ ಅಲ್ಟಿಮೇಟ್ ಏಯ್ಮ್ ಆಫ್ ಇವಲ್ಯೂಷನ್ ಈಸ್ ನಾಟ್
ಕ್ರಿಯೇಷನ್ ಆಫ್ ಮ್ಯಾನ್'
ಜೀವ ವಿಕಾಸದ ಕಟ್ಟ ಕಡೆಯ ಗುರಿ ಮನುಷ್ಯನನ್ನ ಸೃಷ್ಟಿಸುವುದಲ್ಲ.
ಇದು ಒಬ್ಬ ಇಂಗ್ಲಿಷ್ ಲೇಖಕನ ಮಾತು.
ಎಂಥ ಅದ್ಭುತ ವಿಚಾರ. ಇದು ನಮಗೆ ಅರ್ಥವಾಗುವುದಿಲ್ಲವೆ?
ಮನುಷ್ಯನ ಸೃಷ್ಟಿಗಾಗಿಯೇ ಪರಿಸರ ರೂಪುಗೊಂಡಿಲ್ಲ. ಭೂಮಿಯ
ಮೇಲಿರುವ ಮಿಲಿಯಾಂತರ ಜೀವ-ನಿರ್ಜೀವ ಕಣಗಳಲ್ಲಿ
ಮನುಷ್ಯನು ಒಂದು ಕಣ ಅಷ್ಟೆ.
ಈ ದೃಷ್ಟಿಯಿಂದಲೇ ಪ್ರಪಂಚದ ಸೃಷ್ಟಿ.
ನಾವು ಮನುಜ ಕುಲವನ್ನು ಶಾಶ್ವತವಾಗಿರಿಸಲು ಹೊರಟಿದ್ದೇವೆ.
ಇದು ಸಾಧ್ಯವೇ?
ಇಂಥ ಒಂದು ಪ್ರಶ್ನೆ ನನ್ನ ಬರವಣಿಗೆಯಲ್ಲಿ ಸದಾ ಕಾಡುತ್ತೆ.