ಓ! ನೋಡದೋ ರಂಸುತಿದೆ
ರಂಜನೀಯ ಕೈದೀಪ
ನೀಲಧಿಯ ತೇಲುತ್ತಿಹ
ಜ್ಯೋತಿಯ ಸ್ವರ್ದ್ವೀಪ
ಕನ್ನಡದ ವರ್ಡ್ಸ್ವರ್ತ್ಸ್ ಎಂದೇ ಖ್ಯಾತಿ ಪಡೆದ ಮಲೆನಾಡಿನ ಸೊಬಗಿನ ಕುಪ್ಪಳಿ, ಹಿರೇಕೊಡಿಗೆ, ಕವಿಶೈಲ, ನವಿಲುಗುಡ್ಡೆ, ನವಿಲುಕಲ್ಲುಗಳಲ್ಲಿ ಆಡಿ ಬೆಳೆದು ಮಲೆನಾಡಿನ ರಮ್ಯತೆಯ ನಿಸರ್ಗದ ರಹಸ್ಯವನ್ನು ನಮ್ಮ ಮುಂದಿಟ್ಟ ಕುವೆಂಪು ಅವರ ಮೇಲಿನ ಕವನ ಎಷ್ಟೊಂದು ಅರ್ಥಪೂರ್ಣವಾದ ರಮ್ಯತೆಯನ್ನು ಹೇಳುತ್ತಿದೆ.
ರಾತ್ರಿ ಎನ್ನುವ ಹೆಣ್ಣಿನ ಕೈದೀಪವಾಗಿ ಹುಣ್ಣಿಮೆ ಚಂದ್ರ ಕಾಣುತ್ತಿದೆ. ಸಹಜವಾಗಿ ಹೆಣ್ಣೊಬ್ಬಳ ಬೊಗಸೆಯಲ್ಲಿ ಬೆಳಗುವ ದೀಪದ ದೃಶ್ಯ ನಮ್ಮ ಸಾಂಸ್ಕೃತಿಕ ಚೌಕಟ್ಟಿನ ಕೈಗನ್ನಡಿ.
ಅದನ್ನು ಅರ್ಥೈಯಿಸಿಕೊಳ್ಳುವ ಸಾಮರ್ಥ್ಯ ನಮಗೆ ಬೇಕು.