ಸಾರಾಂಶ

ಕನ್ನಡ ಪತ್ತೇದಾರಿ ಸಾಹಿತ್ಯ ಲೋಕ ಕಂಡ ಅತ್ಯಂತ ಜನಪ್ರಿಯ ಕಾದಂಬರಿಗಾರ. ದಿವಂಗತ ಟಿ.ಕೆ. ರಾಮರಾವ್ ಅವರು ನಮ್ಮೊಂದಿಗೆ ಇಲ್ಲವಾಗಿ ಇಪ್ಪತ್ತೈದು ವರ್ಷಗಳೇ ಸಂದಿವೆ. ಅವರ ಸುಪ್ರಸಿದ್ಧ-ಜನಪ್ರಿಯ ಪತ್ತೇದಾರಿ ಕಾದಂಬರಿಗಳ ನೆನಪು ಇಂದಿಗೂ ಕನ್ನಡಿಗರ ಹೃದಯದಲ್ಲಿ ಇನ್ನೂ ಹಸಿರಾಗಿ ಉಳಿದಿದೆ. ಅವರ ಕಾದಂಬರಿಗಳನ್ನು ಕನ್ನಡಿಗರು ಇನ್ನೂ ಮೆಲುಕು ಹಾಕುತ್ತಾರೆ.
ಕನ್ನಡ ಪತ್ತೇದಾರಿ ಕಾದಂಬರಿಪ್ರಿಯ ಓದುಗರ ಮನತಣಿಸಲು ಶ್ರೀ ಟಿ.ಕೆ. ರಾಮರಾವ್ ಅವರ ಎಲ್ಲ ಜನಪ್ರಿಯ ಪತ್ತೇದಾರಿ ಕಾದಂಬರಿಗಳನ್ನು ಮತ್ತೆ ಆಧುನಿಕವಾಗಿ ಮುದ್ರಿಸಿ, ಕನ್ನಡ ಓದುಗರ ಮುಂದಿಡುತ್ತಿದ್ದೇವೆ.
'ಮೂರನೆಯ ಕೀಲಿ ಕೈ, ಕಪ್ಪು ಕೈ, ಬೆದರು ಗೊಂಬೆ, ಡೊಂಕುಮರ, ಸೀಳು ನಕ್ಷತ್ರ, ರಹಸ್ಯ ಪತ್ರ, ಕೆಂಪು ಮಣ್ಣು, ಪಯಣದ ಕೊನೆ, ಕೋವಿ ಕುಂಚ, ವರ್ಣಚಕ್ರ, ಸೀಮಾರೇಖೆ, ಮರಳು ಸರಪಣಿ, ಹಿಮಪಾತ, ದಿಬ್ಬದ ಬಂಗಲೆ, ಸರ್ಪದಂಡೆ, ಸೇಡಿನ ಹಕ್ಕಿ- ಎಂದು ಶ್ರೀ ಟಿ.ಕೆ. ರಾಮರಾವ್ ಅವರ ಜನಪ್ರಿಯ ಪತ್ತೇದಾರಿ ಕಾದಂಬರಿಗಳೆಲ್ಲಾ ಒಂದೊಂದಾಗಿ ಕನ್ನಡಿಗರ ಕೈ ಸೇರಲಿವೆ.

ಕೋವಿ ಕುಂಚ
ಲೇಖಕರು:
ಟಿ.ಕೆ. ರಾಮರಾವ್
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಧೃತಿ ಪ್ರಕಾಶನ
ಆಕಾರ:
1/8 ಡೆಮಿ
ಮುದ್ರಣ:
2010
ರಕ್ಷಾಪುಟ:
---
ಪುಟಗಳು:
250
ಬೆಲೆ:
135 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು