ಸಾರಾಂಶ

ಸ್ವಗೃಹೇ ಪೂಜ್ಯತೇ ಮೂರ್ಖಃ
ಸ್ವಗ್ರಾಮೇ ಪೂಜ್ಯತೇ ಪ್ರಭುಃ|
ಸ್ವದೇಶೇ ಪೂಜ್ಯತೆ ರಾಜಾ|
ವಿದ್ವಾನ್ ಸರ್ವತ್ರ ಪೂಜ್ಯತೇ||

'ಮೂರ್ಖ ತನ್ನ ಮನೆಯಲ್ಲಿ ಮಾತ್ರ ಗೌರವಿಸಲ್ಪಟ್ಟರೆ ಊರ ಯಜಮಾನನಿಗೆ ತನ್ನೂರಿನಲ್ಲಿ ಮಾತ್ರ ಗೌರವ. ರಾಜನಿಗೆ ದೊರಕುವ ಗೌರವ ಅವನ ಅರಸುತನವಿರುವ ದೇಶಕ್ಕೆ ಮಾತ್ರ ಸೀಮಿತವಾದರೆ, ವಿದ್ವಾಂಸರಿಗೆ ಎಲ್ಲರಿಂದಲೂ ಎಲ್ಲೆಲ್ಲೂ ಗೌರವ' ಎಂದ ಮಾಧವ ಧರಿತ್ರಿಯನ್ನು ನೋಡುತ್ತ.
ಮೌನವಾಗಿ ನಸು ನಗೆ ಬೀರಿದಳು.
"ನೀನು ಸಾಧನೆಯ ಪಟ್ಟಿಯಲ್ಲಿ ಸೇರಬೇಕು. ನೂರು ಜನರಲ್ಲಿ ಸಾಧಕರು ಐದು ಜನವಾದರೆ, ಇನ್ನ ತೊಂಬತ್ತೈದು ಜನ ವೀಕ್ಷಕರು. ನಿನ್ನ ಫಲ ಸಾಧನೆ ದೇಶಕ್ಕೆ ಸಂದಾಯವಾಗಬೇಕು. ಮಾನವ ಕುಲಕ್ಕೆ ಸಂದಾಯವಾಗಬೇಕು" ಎಂದ ಮಾಧವನತ್ತ ನೋಡಿ ನಸು ನಗೆ ಬೀರಿದಳು.
ಕನಸುಗಳು ಸ್ವಂತಕ್ಕಾಗಿ ಅಲ್ಲ, ಸ್ವಾರ್ಥಕ್ಕಾಗಿ ಅಲ್ಲ, ದೇಶಕ್ಕಾಗಿ ಮಾನವ ಕುಲ ಕಲ್ಯಾಣಕ್ಕಾಗಿ.

ಮಾಗಿಯ ಮಂಜು
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
2018
ರಕ್ಷಾಪುಟ:
ಪಾ ಸ ಕುಮಾರ್
ಪುಟಗಳು:
270
ಬೆಲೆ:
200 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು