ಸಾರಾಂಶ

ಆದಿಕವಿ, ವಾಲ್ಮೀಕಿ, ರಾಮಾಯಣದ ಒಂದು ಸಂದರ್ಭದಲ್ಲಿ ಸೀತೆಯ ಮಾನಸಿಕ ಸೌಂದರ್ಯದ ಪೂರ್ಣ ದರ್ಶನ ಮಾಡಿಕೊಡುತ್ತಾನೆ. ಶ್ರೀರಾಮ ವಿಚಲಿತನಾಗದೆ ಕಾಡಿಗೆ ಹೊರಡುವ ಸನ್ನಿವೇಶ. ಪ್ರಭು, ತಂದೆ-ತಾಯಿ, ಸೋದರರು ಮತ್ತು ಪುತ್ರರು ಅವರವರ ಪಾಪ-ಪುಣ್ಯಗಳಿಗೆ ಅವರವರೇ ಬಾಧ್ಯರಾಗುತ್ತಾರೆ. ಆದರೆ ಪತ್ನಿ ಹಾಗಲ್ಲ ಗಂಡನ ಭಾಗ್ಯವನ್ನ ಮಾತ್ರವಲ್ಲ, ದರಿದ್ರಾವಸ್ಥೆಯನ್ನೂ ಭರಿಸುವವಳು. ಪತಿ-ಪತ್ನಿಯರು ಬೇರೆ ಬೇರೆಯಲ್ಲ. ಒಂದೇ ಪ್ರಾಣ, ಎರಡು ದೇಹಗಳು, ಒಂದೇ ವ್ಯಕ್ತಿ ಎರಡು ರೂಪ. ನಿಮ್ಮಂತೆ ನನಗೂ ಕೂಡ ಆಜ್ಞಾಪನೆ ಸಲ್ಲುತ್ತೆ ಎಂದಿದ್ದಳು ಶ್ರೀರಾಮನ ಪಟ್ಟದರಸಿ ಸೀತೆ.
ಹೇಮಾ ಮತ್ತು ಪ್ರಸಾದ್ ಮಧ್ಯೆ ವಿದೇಶಿ ಹೆಣ್ಣು ಬೆಲಿಂಡ ಬಂದಾಗ ನನಗೆ ಆದಿಕವಿ ವಾಲ್ಮೀಕಿ ಚಿತ್ರಿಸಿರುವ ಈ ಸಂದರ್ಭ ನನ್ನ ನೆನಪಿನಲ್ಲಿ ಇತ್ತು.

ಮಧುರ ಗಾನ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1994
ರಕ್ಷಾಪುಟ:
ಪ.ಸ. ಕುಮಾರ್
ಪುಟಗಳು:
164
ಬೆಲೆ:
100 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು