ಅಂತರಂಗದಲ್ಲಿ ಅಡಗಿತ್ತೆಂದರೆ ಭಾವಕ್ಕೆ ಪೂಜ್ಯವೆಲ್ಲಿ
ಬಹಿರಂಗದಲ್ಲಿ ಅಡಗಿತೆಂದರೆ ಕ್ರಿಯಾಬದ್ಧವಲ್ಲ
-ಬಸವಣ್ಣ
ಸಮಾಜದಲ್ಲಿ ದುಃಖ ನೋವು, ಕೊಳಕಿಗಿಂತ ಹೆಚ್ಚಾಗಿ ಬೆಳಕಿನತ್ತ ಸಾಗಬೇಕೆನ್ನುವುದೆ ನನ್ನ ಬರವಣಿಗೆಯ ಉದ್ದೇಶ. ಪ್ರೀತಿ, ಪ್ರೇಮ, ಅಂತಃಕರಣ, ಮೌಲ್ಯಗಳಲ್ಲಿ ನಂಬಿಕೆ ಇಟ್ಟಿರುವ ನನಗೆ, ನನ್ನ ಬರವಣಿಗೆಯ ಮೂಲಕ ಅದನ್ನೆಲ್ಲ ಓದುಗರಿಗೆ ತಲುಪಿಸಬೇಕೆಂಬ ಸದಾಶಯ. ಅದು ಸಫಲವಾಗಿದೆ ಕೂಡ.
ಎಷ್ಟೋ ಜನ ಇಷ್ಟೊಂದು ಒಳ್ಳೆಯವರು, ಮಾನವೀಯತೆಗೆ ಬೆಲೆ ಕೊಡುವ ಜನ ಸಮಾಜದಲ್ಲಿ ಇದ್ದಾರೆಯೇ ಎಂದು ಇಂದಿಗೂ ಪ್ರಶ್ನಿಸುತ್ತಿದ್ದಾರೆ. ಖಂಡಿತ ಇದ್ದಾರೆ. ಅಂಥ ಅತ್ಯುತ್ತಮ ಮನಸ್ಥಿತಿ ಬೆಳೆಸಿಕೊಂಡರೇ, ಸಮಾಜದಲ್ಲಿನ ಅಷ್ಟಿಷ್ಟು ಕಸ ತೆಗೆಯಬಹುದು.