ಸಾರಾಂಶ

ಹರಿಭೂಮದಿರುಳು ಔಪಾಸನವು ಮುಗಿದಿರಲು
ತಾಯ ಬಳಿಗೆನ್ನವಳು ತೆರಳುವಾಗ,
ಅವಳ ಉಂಗುರದ ಬೆರಳೆನ್ನ ಹಿಡಿಯೊಳಗಿರಲು
ಒತ್ತಿದೆನು ಪ್ರೇಮದುತ್ಸಾಹದಿಂದ.
- ಡಾ|| ಕೆ.ಎಸ್. ನರಸಿಂಹಸ್ವಾಮಿ
ಅಲ್ಲಿ ನೆನಪಿಗೆ ಬಂದದ್ದು ಶ್ರೀನಿವಾಸಯ್ಯನವರು ಬರೆಯುತ್ತಿದ್ದ ವಾಕ್ಯದ ಸಾರಾಂಶ: ಪ್ರತಿಯೊಬ್ಬರ ವ್ಯಕ್ತಿತ್ವವು ಮುಖ್ಯವೇ. ಸ್ವಾರಸ್ಯ ಇರುವುದೇ ಸಾಮರಸ್ಯದಲ್ಲಿ. ಹಾಲು ಜೇನಿನಂತೆ ಬೆರೆತು ಸಾಗುವುದೆ ಸಂಸಾರದ ಗುಟ್ಟು. ತಾಳ್ಮೆ ಕಳೆದುಕೊಳ್ಳಬೇಡ. ನೀನು ವೇಣುನ ಅನುಸರಿಸು. ಆಮೇಲೆ ಅವನು ನಿನ್ನನ್ನ ಅನುಸರಿಸುತ್ತಾನೆ. ಅವಳ ಕಣ್ಣಂಚು ಒದ್ದೆಯಾಯಿತು.
ಅದು ನಿಜವೆನಿಸಿತು. ವೇಣು ನಸುನಕ್ಕ.
ಅವಳ ಕಣ್ಣುಗಳಲ್ಲಿ ಗೆಲುವಿನ ಮಿಂಚು ಹರಿದಾಡಿತು.

ಮಾನಸ ವೀಣಾ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1980
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
220
ಬೆಲೆ:
165 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು