"ಅರ್ಥವಾಗದ್ದು ನಮ್ಮ ಬದ್ಕಿನಲ್ಲಿ ಎಷ್ಟೋ
ನಡೆದುಹೋಗುತ್ತೆ. ಕೆಲವೊಮ್ಮೆ ಬೊಟ್ಟು ಮಾಡಿದವರು
ಹೊಣೆಗಾರರಲ್ದೇ ಹೋಗ್ತಾರೆ. ಅಭಿಷೇಕನ್ನ ನೀನು
ನಿರಾಕರಿಸೋಲ್ಲ ಎನ್ನುವ ನಂಬ್ಕೇ" ಇಂಥ ಒಂದು
ಸತ್ಯನ ವಿಭಾ ಮುಂದೆ ಬಿಚ್ಚಿಟ್ಟರು.
ಇಂಥ ಒಂದು ಅನುಭವ ಎಲ್ಲರ ಬದುಕಿನಲ್ಲಿ ಬಂದು
ಹೋಗಿರುತ್ತದೆ!
ಪ್ರತಿಯೊಬ್ಬರು ಸತ್ಯಾನ್ವೇಷಣೆಗೆ ತಮ್ಮ ಮನಸ್ಸನ್ನ ಹಚ್ಚಿದಾಗ
ಇಂಥ ಎಷ್ಟೋ ವಿಷಯಗಳು ಬೆಳಕಿಗೆ ಬರುತ್ತೆ. ಜೊತೆಯಲ್ಲಿ
ಇದ್ದವರು ಏನೂ ಅಲ್ಲವಾಗಿ ಹೋಗುತ್ತಾರೆ. ಕ್ಷಣ ಕಂಡವರೇ
ಜೀವನದಲ್ಲಿ ಉಳಿದು ಹೋಗ್ತಾರೆ. ಇದೊಂದು ವಿಪರ್ಯಾಸ.
ಅದಕ್ಕೆ 'ಮತ್ತೊಂದು ಬಾಡದ ಹೂ'ನ ವಿಭಾ ಮತ್ತು
ಅಭಿಷೇಕ್ ಸಾಕ್ಷಿಯಾದರು.