ಅದು ಸೊರಗಿ ನೆಲಕ್ಕುರಿಳಿದ ಗುಲಾಬಿ ಕಡ್ಡಿಗಳು ಅವಳೆದೆಗೆ ಹಚ್ಚಿದ ಬೆಂಕಿ ಇಂದಿನವರೆಗೂ ಹೊಗೆಯಾಡುತ್ತಲೇ ಇತ್ತು. ಎಂದಾದರೂ ಬಲವಾಗಿ ಗಾಳಿ ಬೀಸಿದರೆ ಧಗ್ಗನೆ ಹತ್ತಿ ಉರಿಯಬಹುದು. ಅದರ ತಾಪದಿಂದ ಇಡೀ ಪರಿಸರ ಹತ್ತಿ ಉರಿಯಬಹುದು. ಆ ಉರಿಯಲ್ಲಿ ಅವಳನ್ನು ತಳ್ಳಿ ನರೇಂದ್ರ ದೂರ ಉಳಿಯಬಹುದು!
ಅದಕ್ಕೊಂದು ಪರಿಹಾರ! ಸುಡು ಬೇಸಿಗೆಯ ಪ್ರಕ್ಷುಬ್ದ ವಾತಾವರಣವನ್ನು ತನ್ನ ಶೀತಲ ಕಿರಣಗಳಿಂದ ತಂಪುಗೊಳಿಸಲು ಶುಭ್ರ ಆಕಾಶದಲ್ಲಿ ಶಶಿ ಮೂಡಿ ಬಂದಿದ್ದ.