ತೀರಾ ಬಾಯಾರಿ ಬಳಲಿ ಸೋತು ಹೋದ ಮನುಷ್ಯ ಬದುಕಿಸಬಹುದಾದ ಒಂದೇ ಒಂದು ತೊಟ್ಟು ಜಲ ಸಿಕ್ಕಿದ್ರೂ ಬಾಯಿ ಹಾಕ್ತಾನೆ. ಆಗ ಅವನದೇ ಜೀವ ಅವ್ನಿಗೆ ಮುಖ್ಯವಾಗಿರುತ್ತೆ. ಬೇರೆಲ್ಲ ಗೌಣ. ನಂತರವೇ ಅದು ಕುಡಿಯಲು ಯೋಗ್ಯವೇ?
ಅದರಿಂದ ತನಗೇನಾದರೂ ಹಾನಿಯೇ? ಇಲ್ಲ ಬೇರೆಯವರ ಸ್ವಾಸ್ತ್ಯ ಕೆಡುತ್ತದೆಯೇ? ಸಮಾಜದ ಕಟ್ಟುಪಾಡುಗಳನ್ನು ಅತಿಕ್ರಮಿಸಿದಂತಾಗುತ್ತದೆಯೇ? ಬೇರೆಯವರಿಗೆ ಇದರಿಂದ ಅನ್ಯಾಯವೇ? ತಾನು ಕುಡಿದ ಜಲ ಬೇರೆಯವರ ಸ್ವತ್ತಾ? ಇಷ್ಟೆಲ್ಲ ನಂತರದ ಯೋಚನೆ. ನನ್ನ ಸ್ಥಿತಿಯು ಹಾಗೆ ಇತ್ತು. ಇದು ಕಾದಂಬರಿಯಲ್ಲಿನ ಒಬ್ಬ ಅಮಾಯಕ ಪಾತ್ರದ ನಿಸ್ಸಾಯಕ ಹೆಣ್ಣಿನ ಅನಿಸಿಕೆ.