ಹೂವು ಬಳ್ಳಿಯ ಹುಚ್ಚು
ಕವಿತೆ ಕವಿಗಳ ಹುಚ್ಚು
ಬೆಳಕು ಹೊತ್ತಿನ ಹುಚ್ಚು
ಮಳೆಯು ಮೋಡದ ಹುಚ್ಚು
ಕುವೆಂಪು
ಲೋಕದ ಹುಚ್ಚನ್ನು ಎಷ್ಟು ಅದ್ಭುತವಾಗಿ
ವರ್ಣಿಸಿದ್ದಾರೆ ನಮ್ಮ ಪೂಜ್ಯ ಕವಿಪುಂಗವರು.
ಪ್ರಪಂಚ ಒಂದು ರೀತಿಯ ಹುಚ್ಚರ ಸಂತೆಯೇ.
ಕಾದಂಬರಿಯನ್ನು ಬರೆದು ಮುಗಿಸಿ ಮತ್ತೊಮ್ಮೆ
ಓದಿದಾಗ, ಪ್ರತಿಯೊಂದು ಪಾತ್ರದಲ್ಲಿಯೂ
ಒಂದಲ್ಲ ಒಂದು ಹುಚ್ಚು ಗೋಚರವಾಯಿತು.
ಹೌದು, 'ಹುಟ್ಟು ಸಾವಿನ ಹುಚ್ಚು, ಸಾವು ಹುಟ್ಟಿನ
ಹುಚ್ಚು.' ಪ್ರೀತಿ ಕೆಲವರ ಹುಚ್ಚಾದರೆ, ಕೀರ್ತಿ
ಕೆಲವರ ಹುಚ್ಚು. ಇಡೀ ಕಾದಂಬರಿಯೇ ಹುಚ್ಚಿನ
ತಾಕಲಾಟವಾಗಿ ಕಂಡಿತು. ಹೆಚ್ಚಿನವರ ಪ್ರಕಾರ
ಜೀವನವೊಂದು ಹುಚ್ಚಿನ ಅರಮನೆ, ಆದರೆ
ಅದರಲ್ಲಿ ಎಲ್ಲವೂ ಇದೆ.