ಒಲುಮೆ ಚೇಳು ಸಕ್ಕರೆಯದು
ಕಚ್ಚಿದರೂ ಅಲ್ಲ ಕಹಿ
ಅದರ ಕೊಂಡಿ ಅಕ್ಕರೆಯದು
ಚುಚ್ಚಿದರೂ ಬೆಲ್ಲ ಸಿಹಿ
- ರಾಷ್ಟ್ರಕವಿ ಕುವೆಂಪು
ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ 'ಕುಟುಂಬ' ಮತ್ತು 'ವಿವಾಹ' ಎರಡು ಆಧಾರ ಸ್ತಂಭಗಳು. ಯಾವುದೇ ವಿಧಿ-ಸಂಪ್ರದಾಯ ಒಮ್ಮಿಂದೊಮ್ಮೆಗೆ ಹುಟ್ಟಿಕೊಳ್ಳುವಂಥದಲ್ಲ. ಪ್ರಕೃತಿ-ಪುರುಷನ ಬೆಸುಗೆಯನ್ನು ಗಟ್ಟಿಯಾಗಿ ರೂಪುಗೊಳಿಸಲು ಅದಕ್ಕೊಂದು ಸಂಭ್ರಮದ ಚೌಕಟ್ಟು ಹಾಕಿ ಮಧುರಾನುಭೂತಿಯ ವೇದಿಕೆ ರಚಿಸಲಾಗಿದೆ. ಅದೇ 'ಮದುವೆ'.
ಇಡೀ ಜಗತ್ತೇ ಭಾರತದತ್ತ ಕಣ್ಣರಳಿಸಿ ನೋಡುವುದು ಅನಾದಿ ಕಾಲದಿಂದಲೂ ಅಳಿಯದೆ ಉಳಿದ ನಮ್ಮ ಶ್ರೀಮಂತ ಸಂಸ್ಕೃತಿಯತ್ತ, ಅದರಲ್ಲಿನ ಮುಖ್ಯವಾದ ದಾಂಪತ್ಯದ ನಡಿಗೆ 'ನಾತಿ ಚರಾಮಿ' ಎನ್ನುವ ಸಾಂಗತ್ಯದತ್ತ.