ಸಾರಾಂಶ

ನಿಲ್ಲಿಸದಿರು ವನಮಾಲೀ
ಕೊಳಲ ಗಾನವ
ನಿಲ್ಲಿಸೆ ನೀ ಕಳೆವುದೆಂತೊ
ಭವಭೀತಿಯ ಕೇಶವ||
- ಪಜ್ಯ ಪ.ತಿ.ನ
ಕೃಷ್ಣ ಕೊಳಲಗಾನವನ್ನ ನಿಲ್ಲಿಸಿದಾಗ ಗೋಪಿಯರು ಮಾಡುವ ಪ್ರಾರ್ಥನೆಯ ಒಂದು ಸುಂದರ ಅದ್ಭುತ ವರ್ಣನೆ. ಬೃಂದಾವನದಲ್ಲಿ ಮಾತ್ರವಲ್ಲದೆ, ಜಗತ್ತಿನ ಪಶು, ಪಕ್ಷಿ, ಪ್ರಾಣಿ, ಮಾನವ ಚೇತನಗಳೆಲ್ಲ ಪ್ರೇಮದ ಸುತ್ತ ತಿರುಗುತ್ತದೆ. ಪ್ರೇಮವೆನ್ನುವುದು ಅಲೌಕಿಕ ಗಾನ ವರ್ಷ (ಇಂಥ ವರ್ಷಕ್ಕಾಗಿಯೇ ಎಲ್ಲರ ಚಡಪಡಿಕೆ).
ಸಂಬಂಧಗಳು, ಸ್ವಾಭಿಮಾನ, ಐಡೆಂಟಿಟಿ, ಅವಲಂಬನೆ ಮಧ್ಯ ನೈತಿಕತೆಯ ಒಳಮಿಂಚನ್ನ ಪ್ರಸರಿಸುವ ದೀಪಿಕಾ ಎಲ್ಲರಿಗೂ ಇಷ್ಟವಾಗುತ್ತಾಳೆ. ಭಾವ ಶ್ರೀಮಂತಿಕೆಯ ಅದ್ಭುತವಾದ ಪರಿಕಲ್ಪನೆಯ ಕೊಳಲಗಾನವಿದು.
'ಅಧಿಕಾರ ಮತ್ತು ಸಂಪತ್ತನ್ನು ಪಜಿಸುವ ಸಮಾಜದಲ್ಲಿ ನಾವು ಇದ್ದೇವೆ. ಶಾಲೆಗಳಲ್ಲಿ ಮಕ್ಕಳಿಗೆ ನೈತಿಕ ಪಾಠ ಬೋಧಿಸಬೇಕಾಗಿದೆ.'
ಇದನ್ನ ಹೇಳಿದವಳು ಪ್ರೊಫೆಸರ್ ದಿಜೇಂದ್ರ ಬೋಸರ ಮಗಳು ದೀಪಿಕಾ.

ನಿಲ್ಲಿಸದಿರು ಕೊಳಲಗಾನವ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
2016
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
218
ಬೆಲೆ:
175 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು