ಸಾರಾಂಶ

ಯಂಡಮೂರಿ ವೀರೇಂದ್ರನಾಥರ ಕಾದಂಬರಿಗಳೆಂದರೆ ಸಾಹಿತ್ಯಪ್ರಿಯರಿಗೆ ಬಲು ಅಚ್ಚುಮೆಚ್ಚು. ವಿಶಿಷ್ಟ ನಿರೂಪಣಾ ಶೈಲಿ, ಕುತೂಹಲವನ್ನು ಅಂತ್ಯದವರೆಗೂ ಕಾಯ್ದಿಟ್ಟುಕೊಳ್ಳುವ ಪರಿ, ದೈನಂದಿನ ಘಟನೆಗಳಿಗೂ ವಿಶೇಷ ಕೌತುಕವನ್ನೂ ಸೊಬಗನ್ನೂ ಮೂಡಿಸುವ ಬಗೆ, ಸಾಮಾಜಿಕ ವಿಷಯವೇ ಆಗಲಿ ಪ್ರೀತಿ-ಪ್ರೇಮದ ಸಂಭ್ರಮ-ವಿಭ್ರಮಗಳನ್ನೇ ಆಗಲಿ ಅಭಿವ್ಯಕ್ತಿಸುವಾಗ ತೋರುವ ನಿರ್ಭಿಡೆ ಅವರನ್ನು ದೇಶದ ಸಮಕಾಲೀನ ಲೇಖಕರಲ್ಲಿ ಹೆಸರಾಂತ ಕಾದಂಬರಿಕಾರರನ್ನಾಗಿ ಕಡೆದು ನಿಲ್ಲಿಸಿವೆ.
ನಾಟಕಕಾರರಾಗಿ, ಕಾದಂಬರಿಕಾರರಾಗಿ, ಚಲನಚಿತ್ರ ನಿರ್ದೇಶಕರಾಗಿ ವ್ಯಕ್ತಿತ್ವ ವಿಕಸನದ ಪ್ರೇರಕರಾಗಿ ಬಹುಮುಖಿ ವ್ಯಕ್ತಿತ್ವದ ಯಂಡಮೂರಿಯವರು ತಮ್ಮ ವಿದ್ಯಾರ್ಥಿ ದೆಶೆಯಲ್ಲಿ ಇತರರಿಗೆ ಪಾಠ ಹೇಳಿ ತಮ್ಮ ಬದುಕನ್ನು ಸ್ವಂತವಾಗಿ ಕಟ್ಟಿಕೊಂಡು ಚಾರ್ಟ್ರ್ಡ್ ಅಕೌಂಟೆಂಟ್ ಆದವರು. ಅವರ ಈ ಪರಿಶ್ರಮದಲ್ಲಿ ಕಂಡುಂಡ ಅನುಭವಗಳು ಅವರ ಕೃತಿಗಳಲ್ಲೂ ಪಡಿಮೂಡಿದರೆ ಅದು ಸಹಜವಾದದೇ ಸರಿ.
ಯಂಡಮೂರಿಯವರ ಕಾದಂಬರಿಗಳನ್ನು ಕನ್ನಡಕ್ಕೆ ತರುವಲ್ಲಿ ನಿಷ್ಣಾತರಾಗಿರುವ ಹೆಸರಾಂತ ಕಥೆಗಾರ ರಾಜಾ ಚೆಂಡೂರ್ ಈ ಕೃತಿಯನ್ನೂ ಅನುವಾದಿಸಿದ್ದಾರೆ. ಇವರಿಬ್ಬರ ತಾಳ-ಮೇಳವಿರುವ ಅನೇಕ ಕಾದಂಬರಿಗಳನ್ನು ಹೊರತಂದಿರುವ ಹೊರತರುತ್ತಿರುವ ಸಂತಸ ನಮ್ಮದು.

ನಿರ್ಧಾರ
ಲೇಖಕರು:
ಯಂಡಮೂರಿ ವೀರೇಂದ್ರನಾಥ್
ಅನುವಾದಕರು :
ರಾಜಾ ಚೆಂಡೂರ್
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
2003
ರಕ್ಷಾಪುಟ:
ಪ.ಸ. ಕುಮಾರ್
ಪುಟಗಳು:
228
ಬೆಲೆ:
135 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು