ಸಾರಾಂಶ

'ನಿಶಾಂತ್' ಅನಾಥ!
ಪುಸ್ತಕ, ಲೇಖನಿಯ ಬಗ್ಗೆ ಅಕ್ಕರೆ ಇರಿಸಿಕೊಂಡ 'ನಿಶಾಂತ್'ನ ಮನೆಯವರ ವಿರೋಧ ಎದುರಿಸಿಯೆ ಸ್ಕೂಲಿಗೆ ಕಳಿಸಿದವರು, ಕನಿಕರ, ಸಹಾನುಭೂತಿ ತೋರಿಸಿದವರು, ಪುಸ್ತಕ ತೆಗೆಸಿಕೊಟ್ಟು ಅವನ ಓದಿನ ಬಗ್ಗೆ ಕಾಳಜಿ ವಹಿಸಿದವರು, ಬೇರೆ ಯಾರೋ! ಬಟ್ಟೆ, ಬರೆ ತೆಗೆಸಿಕೊಟ್ಟವರು ಮತ್ತೆ ಕೆಲವರು. ಭಟ್ಟರು ದೇವಸ್ಥಾನದ ಅಂಗಳದಲ್ಲಿ ಕೂಡಿಸಿಕೊಂಡು ರಾಮಾಯಣ, ಮಹಾಭಾರತ ಹೇಳಿದರು ಪ್ರೀತಿಯಿಂದ. ಚಿಕ್ಕಣ್ಣ ಗರಡಿಯಲ್ಲಿ ಸಾಮು ಮಾಡಿಸಿ ಅವನನ್ನ ಪಳಗಿಸಿದ. ಅವನು ಅದ್ಭುತವಾಗಿ ಬೆಳೆದ.
ಇಂಥ 'ನಿಶಾಂತ್' ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ಅಭಿನಯದಲ್ಲಿ 'ಜಗಮೆಚ್ಚಿದ ಮಗ' ನಾಗಿ ತೆರೆಯ ಮೇಲೆ ರಾರಾಜಿಸಿದಾಗ ಜನ ಮೆಚ್ಚಿಕೊಂಡರು. ಅದಕ್ಕೆ ಸ್ಫೂರ್ತಿಯಾದವರು ಹಲವರು.
'ನಿಶಾಂತ್' ಅಂಥವರು ಎಷ್ಟೋ ಜನ! ಆದರೆ ಓದುಗರು ಮೆಚ್ಚಿಕೊಂಡಿದ್ದಾರೆ. ಅಂಥವರು ಸಿಕ್ಕಾಗ, ಭಟ್ಟರು, ಚಿಕ್ಕಣ್ಣನಂಥವರು ಬೇಕಾಗುತ್ತಾರೆ.

ನಿಶಾಂತ್
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1990
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
152
ಬೆಲೆ:
100 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು