ಸಾರಾಂಶ

ಇಂಗ್ಲಿಷ್ ಸಾಹಿತ್ಯದಲ್ಲಿ ಆಲಿವರ್ ಗೋಲ್ಡ್ಸ್ಮಿತ್ (೧೭೨೮-೧೭೭೪) ನಂತೆ ನಮ್ಮ ಪ್ರೀತಿಯನ್ನು ಗೆದ್ದುಕೊಳ್ಳುವವರು ವಿರಳ.
'ಅಗಸ್ಟಿನ್ ಯುಗ'ದ ಶ್ರೇಷ್ಠ ಪ್ರಬಂಧಕಾರನಾಗಿದ್ದ ಅವನು ಕವಿತೆ, ನಾಟಕ, ಕಾದಂಬರಿ, ಜೀವನ ಚರಿತ್ರೆಗಳನ್ನೂ ರೋಮನ್, ಇಂಗ್ಲೆಂಡ್ ಹಾಗೂ ಗ್ರೀಸಿನ ಚರಿತ್ರೆಗಳನ್ನೂ ಬರೆದಿದ್ದಾನೆ.
ಗೋಲ್ಡ್ಸ್ಮಿತ್ನ 'ಡೆಸರ್ಟೆಡ್ ವಿಲೆಜ್' ನಮ್ಮ ಇಂಗ್ಲಿಷ್ ಪಠ್ಯಪುಸ್ತಕಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ, ಬಹುಮಂದಿ ವಿದ್ಯಾವಂತರಿಗೆ ಪರಿಚಿತವಾಗಿರುವ ಕವನ. ಚೀನೀ ಪ್ರವಾಸಿಯೊಬ್ಬ ತನ್ನ ಗುರುವಿಗೆ ಮತ್ತು ಇತರರಿಗೆ ಬರೆದಂತಿರುವ ಅವನ ಪತ್ರ ಸ್ವರೂಪೀ ಪ್ರಬಂಧ ಸಂಗ್ರಹ 'ದಿ ಸಿಟಿಜನ್ ಆಫ್ ದಿ ವರ್ಲ್ಡ್' - ಗೋಲ್ಡ್ಸ್ಮಿತ್ನ ಹೆಸರನ್ನು ಶಾಶ್ವತಗೊಳಿಸಿದೆ. ಪ್ರಪಂಚದ ಹಲವು ಭಾಷೆಗಳಿಗೆ ಭಾಷಾಂತರಗೊಂಡಿರುವ ಅವನ 'ಷಿ ಸ್ಟೂಪ್ಸ್ ಟು ಕಾನ್ಕರ್' ಅಂದು ಹೇಗೊ ಇಂದೂ ಹಾಗೇ ಜನರಂಜನೆ ಮಾಡಬಲ್ಲ ಸುಪ್ರಸಿದ್ಧ ನಾಟಕ. 'ವಿಕಾರ್ ಆಫ್ ವೇಕ್ಫೀಲ್ಡ್' ಅವನ ಏಕೈಕ ಕಾದಂಬರಿ.
ಗೋಲ್ಡ್ಸ್ಮಿತ್ನ ಜೀವನ ಮತ್ತು ಸಾಹಿತ್ಯವನ್ನು, ಆ ಕಾಲದ ಇಂಗ್ಲಿಷ್ ಸಾಹಿತ್ಯ ಪ್ರಪಂಚವನ್ನು ಈ ಕಿರು ಹೊತ್ತಿಗೆ ಸಮಗ್ರವಾಗಿಯೂ ಸಮರ್ಪಕವಾಗಿಯೂ ಪರಿಚಯಿಸುತ್ತದೆ. ನಾಲ್ಕು ದಶಕಗಳ ಹಿಂದೆ ಮೊದಲು ಪ್ರಕಟಗೊಂಡಿದ್ದ ಈ ವಿಮರ್ಶಾಕೃತಿ ಬಹುಶಃ ಗೋಲ್ಡ್ಸ್ಮಿತ್ನನ್ನು

ಆಲಿವರ್ ಗೋಲ್ಡ್‌ಸ್ಮಿತ್
ಲೇಖಕರು:
ಪ್ರೊ ಎಲ್ ಎಸ್ ಶೇಷಗಿರಿ ರಾವ್
ಪ್ರಕಾರ:
ಅನುವಾದ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಡೆಮಿ
ಮುದ್ರಣ:
1972
ರಕ್ಷಾಪುಟ:
---
ಪುಟಗಳು:
106
ಬೆಲೆ:
70 ರೂ.
ಲೇಖಕರ ಪರಿಚಯ
ಪ್ರೊ ಎಲ್.ಎಸ್. ಶೇಷಗಿರಿ ರಾವ್ ಅವರು ಹುಟ್ಟಿದ್ದು ೧೯೨೫ರಲ್ಲಿ, ಬೆಂಗಳೂರಿನಲ್ಲಿ. ಇಂಗ್ಲಿಷ್ ಭಾಷೆ, ಸಾಹಿತ್ಯಗಳಲ್ಲಿ ಬಂಗಾರದ ಪದಕಗಳೊಡನೆ ಎಂ.ಎ. ಪದವಿ ಪಡೆದ ಅವರು ಹಲವು ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದಿಂದ ನಿವೃತ್ತರಾದರು. ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲನೆಯ ಅಧ್ಯಕ್ಷರು ಅವರು. ಹಲವು ದೇಶಗಳ ಸಾಹಿತ್ಯಗಳ ಅಧ್ಯಯನದ ಫಲವನ್ನು ಧಾರೆ ಎರೆದು ಕನ್ನಡ ಸಾಹಿತ್ಯ ವಿಮರ್ಶೆಗೆ ಹೊಸ ಚೈತನ್ಯ ತಂದುಕೊಡುವ ಮೂಲಕ ವಿಮರ್ಶಾ ಕ್ಷೇತ್ರದಲ್ಲಿ ಅಗ್ರಗಣ್ಯರೆನಿಸಿದ ರಾಯರು ಎಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಸಣ್ಣಕತೆಗಳು, ವಿಮರ್ಶಾ ಕೃತಿಗಳು, ಸಾಹಿತ್ಯ ಚರಿತ್ರೆಗಳು, ಜೀವನ ಚಿತ್ರಗಳು, ಭಾಷಾಂತರಗಳು, ನಿಘಂಟುಗಳು, ಇಂಗ್ಲಿಷಿನಲ್ಲಿ ರಚಿಸಿದ ಗ್ರಂಥಗಳು ಸೇರಿವೆ. ಭಾರತ-ಭಾರತಿ ಪುಸ್ತಕ ಸಂಪದದ ಪ್ರಧಾನ ಸಂಪಾದಕರಾಗಿ, ಕನ್ನಡ ಭಾರತಿ, ಭಾರತೀಯ ಸಾಹಿತ್ಯ ಸಮೀಕ್ಷೆ, ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ, ಕಿರಿಯರ ಕರ್ನಾಟಕ, ಜ್ಞಾನ ಗಂಗೋತ್ರಿ, ಸಪ್ನಾ ಜ್ಞಾನ ದೀಪಮಾಲೆ, ಸಪ್ನಾ ದಿವ್ಯ ದರ್ಶನ ಮಾಲೆ ಮೊದಲಾದ ಹಲವು ಗ್ರಂಥ ಯೋಜನೆಗಳ ಸಂಪಾದಕರಾಗಿ ಅವರು ನೀಡಿರುವ ಕೊಡುಗೆ ಅನನ್ಯವಾದುದು. ಜೊತೆಗೆ ಅನೇಕ ಸಂಘ-ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಕಾರ್ಯ ಸಮಿತಿಗಳ ಸದಸ್ಯರಾಗಿ ಕನ್ನಡ ನಾಡು, ನುಡಿಯ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿಯಲ್ಲಿ ನಡೆದ ೭೪ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಚುನಾಯಿಸುವ ಮೂಲಕ ಅವರನ್ನು ಗೌರವಿಸಿದೆ. ಅವರು ಪಡೆದಿರುವ ಪ್ರಶಸ್ತಿಗಳಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಮುಖ್ಯವಾದುವು. ಕನ್ನಡ ಸಾಹಿತ್ಯವನ್ನು ಭಾರತದ ಬೇರೆ ಬೇರೆ ಭಾಷೆಗಳಿಗೆ ಪರಿಚಯಿಸಿದ ಕೆಲವೇ ಕೆಲವರಲ್ಲಿ ರಾಯರದು ಎದ್ದುಕಾಣುವ ಹೆಸರು.