ಕೆಲವು ಮಹಿಳಾ ಮಣಿಗಳ ಆಧುನಿಕ ಸಭ್ಯತೆ, ಸಾಮಾಜಿಕ ಮೆರಗು ಬರೀ ಕಾಸ್ಮಾಟಿಕ್ ಸಂಸ್ಕಾರ. ಜೀವನವನ್ನ ಪ್ರಮಾಣಿಕವಾಗಿ ನಡೆಸಲಾರರು, ಎದುರಿಸಲಾರರು. ಅನುಭವಿಸುವುದಂತೂ ಸಾಧ್ಯವೇ ಇಲ್ಲ. ಇಡೀ ಸ್ತ್ರೀ ಕುಲದ ಉದ್ಧಾರದ ವಕ್ತಾರರಂತೆ ತೋರ್ಪಡಿಸಿಕೊಳ್ಳುವ ಇವರ ವೈಯಕ್ತಿಕ ಜೀವನಕ್ಕೂ, ಆಡುವ ಮಾತುಗಳಿಗೂ ಅಗಾಧ ವ್ಯತ್ಯಾಸ; ಎರಡು ಸಮಾನಂತರ ರೇಖೆಗಳ ತರಹ, ರೈಲು ಹಳಿಗಳ ತರಹ ಬೇರ್ಪಟ್ಟೇ ಇರುತ್ತೆ. ಅಂಥ ಪುಷ್ಪವತಿಯ ಚಿತ್ರಣ ಈ ಕಾದಂಬರಿಯಲ್ಲಿದೆ. ಇಂಥ ಪುಷ್ಪವತಿಯರು ಎಲ್ಲೆಲ್ಲೂ ಇರುತ್ತಾರೆ! ಸಮಾಜಕ್ಕೆ ಇಂಥವರು ಅನಿವಾರ್ಯ ಕೂಡ.