ಸಾರಾಂಶ

ನೀವು ಕಷ್ಟದ ಸಮಯದಲ್ಲಿ, ಇಲ್ಲ ಯಾವುದೋ ಕ್ಲಿಷ್ಟವಾದ ಸಮಸ್ಯೆಯಲ್ಲಿ ಮುಳುಗಿರುವ ನೀವು ಏನು ಮಾಡುತ್ತೀರಾ? ನನ್ನ ಪ್ರೀತಿಯ ಓದುಗರು ಇಂಥದೊಂದು ಪ್ರಶ್ನೆಯನ್ನು ನನ್ನ ಮುಂದಿಟ್ಟಿದ್ದಾರೆ. ನನ್ನ ಕಾದಂಬರಿಗಳ ಪಾತ್ರಗಳು ಕೂಡ ಇಂಥ ಸಮಯಗಳಲ್ಲಿ ಹೇಗೆ ವರ್ತಿಸುತ್ತವೆ? ಉತ್ತರ ಸರಳವೆನಿಸಿದರು ತೀರಾ ಸೂಕ್ಷ್ಮವಾದದ್ದು.
ಆಗ ನನಗೆ ನೆನಪಾಗುತ್ತಿದ್ದುದು ನಮ್ಮ 'ಮಂಕು ತಿಮ್ಮ' ನ
ಕರ್ತೃವಾದ ಡಿ.ವಿ.ಜಿ.ಯವರ ಕಗ್ಗದ ಸಾಲುಗಳು
'ಸರ್ವರುಂ ಸಾಧುಗಳೆ ಸರ್ವರುಂ ಬೋಧಕರೆ |
ಜೀವನ ಪರೀಕ್ಷೆ ಬಂದಿದಿರು ನಿಲುವತನಕ |
ಭಾವಮರ್ಮಂಗಳೇಳುವುವಾಗ ತಳದಿಂದ |
ದೇವರೇ ಗತಿಯಾಗ - ಮಂಕುತಿಮ್ಮ '
ಈ ಜಗತ್ತಿನಲ್ಲಿ ಎಲ್ಲರೂ ಸಾಧುಸಂತರೇ ಮತ್ತು ಉಪದೇಶಕರೇ, ಆದರೆ ಯಾವಾಗ ಜೀವನದಲ್ಲಿ ಒಂದು ಕಡು ಕಷ್ಟಕರ ಪರೀಕ್ಷೆ ಎದುರಾಗುವುದೋ ಆಗ ಅವನ ಅಂತರಂಗದ ಭಾವನೆಗಳು ವ್ಯಕ್ತವಾಗುತ್ತದೆ. ಆಗ ಅವನನ್ನ ದೇವರೇ ಕಾಪಾಡಬೇಕು. ಇದೇ ಬದುಕಿನ ಒಳಾರ್ಥ.
ಆದರ್ಶವು ಕೂಡ ಅಂತರಂಗದ ನೈತಿಕ ನಂಬುಗೆಗಳನ್ನ ಅನೇಕ ಸಲ ಮೀರಲಾಗುವುದಿಲ್ಲ.

ಪ್ರೀತಿಯ ಹೂಬನ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಡೆಮಿ
ಮುದ್ರಣ:
1986
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
184
ಬೆಲೆ:
120 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು