ಸಾರಾಂಶ

ಬರವಣಿಗೆ ಒಂದು ಜವಾಬ್ದಾರಿಯ ನಿರ್ವಹಣೆ. ಕಚ್ಚಾವಸ್ತುವನ್ನು ಬದುಕಿನಿಂದ ತೆಗೆದುಕೊಂಡರೂ ಸುತ್ತಮುತ್ತಲ ಸಮಾಜದಿಂದ ಪಾತ್ರಗಳ ಆಯ್ಕೆ, ಘಟನೆ, ಸನ್ನಿವೇಶಗಳ ಜೊತೆಗೆ ಮಾನವ ಸಹಜವಾದ ಕೋಪ-ತಾಪಗಳು, ಪ್ರೇಮ ಪ್ರೀತಿ ಸಹಜ ಆವಿರ್ಭಾವಗಳು, ಮತ್ಸರದ ಬಿರುಗಾಳಿ, ಮೋಹದ ಅಂಧತ್ವ - ಒಂದೇ, ಎರಡೇ. ಇವೆಲ್ಲವುಗಳ ನಡುವೆ ರೂಪುಗೊಳ್ಳುವ ಬರಹಕ್ಕೆ ಮಾನಸಿಕ ವಿಶ್ಲೇಷಣೆ ಜೊತೆಗೆ ವೈಚಾರಿಕ ಗಂಭೀರತೆಯ ಅಗತ್ಯವಿದೆ.
ಪ್ರೀತಿ, ಸ್ನೇಹಕ್ಕೆ ಹಲವು ಮುಖಗಳು. ಸಂಬಂಧಗಳನ್ನು ಹಿಡಿದಿಟ್ಟುಕೊಳ್ಳುವ ಚಿತ್ತಭಾವ ಅದಕ್ಕೆ ಸಂಜೀವಿನಿ, ಅಮೃತವರ್ಷಿಣಿ. ಯಾವುದೇ ವಸ್ತುವನ್ನು ಬರಹಕ್ಕೆ ಆಯ್ದುಕೊಂಡರೂ ಅದರದೇ ಮೇಲುಗೈ.
ಎಷ್ಟೇ ಪ್ರಯತ್ನಿಸಿದರೂ ನಮ್ಮ ಬದುಕಿನ ನಡುವೆ ಸದಾ ನುಸುಳುವ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಹಾಗೇ ಇಂದಿರಾ, ವಾರಿಧಿಯ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ.

ರಾಗಸುಧಾ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
2005
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
190
ಬೆಲೆ:
120 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು