ಪ್ರೀತಿ ಇಲ್ಲದ ಮೇಲೆ
ಹೂವು ಅರಳೀತು ಹೇಗೆ?
ಮೋಡ ಕಟ್ಟೀತು ಹೇಗೆ?
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡೀತು ಹೇಗೆ?
- ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ
ಎಂಥ ಅದ್ಭುತವಾದ ಕವನ. ಪ್ರೀತಿಯೆನ್ನುವುದು ಮಾನವರಿಗೆ ಮಾತ್ರವಲ್ಲ, ನಿಸರ್ಗಕ್ಕೂ ಅನ್ವಯವಾಗುವಂಥದ್ದೆ! ಮನಸ್ಸು ಮರುಭೂಮಿಯಾಗುವುದನ್ನು ತಡೆಯಲು ಅದಕ್ಕೆ ಬೇಕಾಗಿರುವುದು ಪ್ರೀತಿಯೆನ್ನುವ ಜೀವಜಲ. ಹಾಗೇ ಕಾವ್ಯದಲ್ಲ್ಲೂ ಪ್ರೀತಿ ಇಲ್ಲದ ಮೇಲೆ ಪದ ಪದ ಕೂಡೋದಿಲ್ಲ. ಅರ್ಥ ಹುಟ್ಟೋದಿಲ್ಲ. ಪದಕ್ಕೆ ಪದ ಜೊತೆಗಿದ್ದ ಮಾತ್ರಕ್ಕೆ ಪದ್ಯ ಹೇಗೆ ಹುಟ್ಟೀತು? ಎಂದು ನಮ್ಮ ಅಭಿಮಾನದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಪ್ರಶ್ನಿಸುತ್ತಾರೆ.
ಪ್ರತಿಯೊಂದರ ಶುರುವಿನಿಂದ ಅಂತ್ಯದವರೆಗೆ ಹರಿದಾಡುವುದೇ ಪ್ರೀತಿಯೆನ್ನುವ ಅರ್ಥಪೂರ್ಣ ಮಾತಿದೆ. ಒಂದು ಕ್ಷಣ ಜಗತ್ತಿನಲ್ಲಿ ಪ್ರೀತಿಯೆನ್ನುವುದು ಇಲ್ಲದಿದ್ದರೆ? ಆಗಿನ ಚಿತ್ರವೇ ಪೂರ್ತಿಯಾಗಿ ಬದಲಾಗಿಬಿಡುತ್ತಿತ್ತು.