ಸಾರಾಂಶ

ಮನುಷ್ಯರು ಸರಿಯಾಗಿ ಅಂದರೆ ಮಾನಸಿಕವಾಗಿ ದಾಕ್ಷಿಣ್ಯಪಡುವ ಸ್ವಭಾವವೇ ಕಾರಣವೇನೋ. ಈ ದಾಕ್ಷಿಣ್ಯ ಪ್ರವೃತ್ತಿಗೆ ಕಾರಣವೆಂದರೆ ಅವರನ್ನು ಬಲಾತ್ಕಾರವಾಗಿ ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ತಂದೆ ತಾಯಿಗಳ ಪ್ರಭಾವ ಎನ್ನಬಹುದು. ಅದಲ್ಲ ಎಂದರೆ ಒಳ್ಳೆಯದೋ-ಕೆಟ್ಟದ್ದೋ ಕೆಲವು ಅಭಿರುಚಿಗಳ ಬಗ್ಗೆ ಚಿಕ್ಕಂದಿನಿಂದ ತಾವು ಬೆಳಸಿಕೊಳ್ಳಬೇಕಾದ ಆಸಕ್ತಿಯನ್ನು ಬೆಳಸಿಕೊಳ್ಳದಿರುವುದು. ಹತ್ತೊಂಬತ್ತು ಇಪ್ಪತ್ತರ ವಯಸ್ಸಿಗೆ ಬರುವ ವೇಳೆಗೆ ಒಬ್ಬ ಯುವಕ ತರು ತಾನು ತಂದೆ ತಾಯಿಗಳ ಕಟ್ಟು ಪಾಡಿನಿಂದ ಹೊರ ಬಂದ ಅವನಿಗೆ ತಾನು ಬಯಸಿದ ಸ್ವಾತಂತ್ರ್ಯ ಸ್ವೇಚ್ಛೆ ದೊರೆತಂತಾಗುತ್ತದೆ. ಮಾನಸಿಕವಾಗಿ ಬೆಳವಣಿಗೆಗೆ ಹೊಂದಿರದ ಅವನಿಗೆ ಆ ಹದಿಹರೆಯದಲ್ಲಿ ಅನೇಕ ಬಣ್ಣ ಬಣ್ಣದ ಕನಸುಗಳು ಕಣ್ಣ ಮುಂದೆ ಸುಳಿದು ಅವು ನನಸುಗಳೆಂದೇ ಭಾಸವಾಗಿ ಸ್ವೇಚ್ಛೇಗೆ ಇನ್ನೊಂದು ತೆರನಾದ ಅರ್ಥ ಗೋಚರವಾಗುವಂತೆ ಮಾಡುತ್ತದೆ. ಇದು ಪತನದ ಮೊದಲ ಹೆಜ್ಜೆ ಎನ್ನಬಹುದು. ಭ್ರಮೆಗೆ ಒಳಗಾದ ಮನಸ್ಸು ಅವನನ್ನು ಅನೇಕ ಸಂದರ್ಭಗಳಲ್ಲಿ ಎಡವುವಂತೆ ಮಾಡುತ್ತದೆ. ಹಾಗಾಗದೆ ತನಗೆ ಎದುರಾದ ಪರಸ್ಥಿತಿಗಳನ್ನು ಕಚ್ಚೆದೆಯಿಂದ ಎದುರಿಸಿ ಮೆಟ್ಟಿ ನಿಲ್ಲುವುದಾದರೆ ಮನಸ್ಸು ಅವನ ಆಜ್ಞೆಗೆ ಒಳಪಟ್ಟು ಅವನು ವೇದಾಂತಿಯಾಗಲು ಸಯಾಕವಾಗುತ್ತದೆ.

ಋಷಿ
ಲೇಖಕರು:
ರಾಜಾ ಚೆಂಡೂರ್
ಪ್ರಕಾರ:
ಕಾದಂಬರಿ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಡೆಮಿ
ಮುದ್ರಣ:
2003
ರಕ್ಷಾಪುಟ:
ಮಧುಸೂದನ್
ಪುಟಗಳು:
140
ಬೆಲೆ:
100 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು