ಮಾಡದ ತಪ್ಪಿಗೆ ಅಹಲ್ಯ ಕಲ್ಲಾಗಲಿಲ್ಲ. ರಾಮನಾಥ ಅವಳಿಗಾಗಿ
ಓಡೋಡಿ ಬಂದಿದ್ದ. ಇಂದಿಗೂ ರಾಮನಾಥ ತನ್ನ ಮೃದು
ಮಧುರವಾದ ಕಂಠದಲ್ಲಿ 'ರಂಗನಾಥನ ಯೋಗ ನಿದ್ದೆಗೆ
ಮಂಗಳದ ದನಿಗೈವಳೆ! ಎರಡು ತೋಳನ್ನು ಚಾಚಿ
ಶ್ರೀರಂಗನನ್ನು ತೆಕ್ಕೆಯಲ್ಲಿ ತಬ್ಬಿದವಳೆ...' ಎಂದು ಪವಿತ್ರಳಾದ
ಕಾವೇರಿಯನ್ನು ನೆನಸತ್ತ ಅಹಲ್ಯೆಯನ್ನು ಮುದ್ದು ಮಾಡುತ್ತಾನೆ.
ಅವಧಾನಿಗಳು ಹಿಂದಿರುಗಿ ಬರಲಿಲ್ಲ.