ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾದ ಕಥೆಗಳ ಸರಮಾಲೆ 'ಸದ್ಗೃಹಸ್ಥೆ' ೧೯೮೩ 'ಪ್ರಥಮ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ'ದ ಸಾಹಿತ್ಯಮಾಲೆಯ ಅಂಗವಾಗಿ ಬಂದ ಲೇಖಕಿಯರ ಕಥಾ ಸಂಕಲದಲ್ಲಿ ಪ್ರಕಟವಾದ ಈ ಕಥೆ ಜೀವನದ ಸೂಕ್ಷ್ಮತೆಯ ಜೊತೆಗೆ ಹೆಣ್ಣು ಹೊದ್ದ ಮುಖವಾಡವನ್ನು ಅನಾವರಣಗೊಳಿಸುತ್ತದೆ. ಸಮಾಜದ ಹಲವಾರು ಸಮಸ್ಯೆಗಳು, ಸೂಕ್ಷ್ಮತೆಗಳು ಇಲ್ಲಿ ಕಥೆಗಳಾಗಿವೆ. ಖ್ಯಾತ ಕಾದಂಬರಿಗಾರ್ತಿಯ ಮೊದಲ ಕಥಾ ಸಂಕಲನ ನಮ್ಮ ಪ್ರಕಾಶನದ ಮೂಲಕ ಹೊರ ತರುತ್ತಿರುವುದು ನಮಗೆ ಸಂತಸದ ಸಂಗತಿ.