ಸಾರಾಂಶ

ಪುಸ್ತಕದ ಬೆನ್ನುಡಿ :
ತೀನಂಶ್ರೀ ಸರಸ್ವತಿಯ ವರಕೃಪೆಗೆ ಪಾತ್ರರಾದ ಅದೃಷ್ಟಶಾಲಿಗಳು. ಇಂಗ್ಲಿಷ್, ಕನ್ನಡ, ಸಂಸ್ಕøತಗಳಲ್ಲಿ ಘನವಾದ ವಿದ್ವತ್ತನ್ನು ಸಂಪಾದಿಸಿದ್ದಾರೆ. ನಿಷ್ಕøಷ್ಟತೆ ಮತ್ತು ನಿರ್ದುಷ್ಟತೆ ಅವರ ಪಾಂಡಿತ್ಯದ ಲಕ್ಷಣ. ಯಾವುದಾದರೂ ವಿಷಯ ಕುರಿತು ಆಳವಾಗಿ ಅಭ್ಯಾಸ ಮಾಡುವತನಕ, ಸಾಕಷ್ಟು ಸಾಮಗ್ರಿಗಳನ್ನು ಸಂಗ್ರಹಿಸುವ ತನಕ, ಪದರಪದರವಾಗಿ ಅಮೂಲಾಗ್ರವಾಗಿ ಅನ್ವೇಷಣೆ ನಡೆಸುವ ತನಕ, ತಮ್ಮ ಸಂಶೋಧನೆಯಲ್ಲಿ ಸಂಪೂರ್ಣ ವಿಶ್ವಾಸ ಮೂಡಿ ಸಂದೇಹ ನಿವಾರಣೆಗೊಳ್ಳುವತನಕ ಅವರು ಯಾವುದನ್ನೂ ಮಾರುಕಟ್ಟೆಗೆ ತರುವುದಿಲ್ಲ. ಇಂಥ ಪಾಂಡಿತ್ಯದ ಜೊತೆಗೆ ಆಧುನಿಕ ವಿಮರ್ಶದೃಷ್ಟಿ ಸಮರಸವಾಗಿ ಸಮಾನಾಂತರವಾಗಿ ಬೆರತಿದೆ.
- ದೇಜಗೌ

ಸಮಾಲೋಕನ
ಲೇಖಕರು:
ತೀ ನಂ ಶ್ರೀಕಂಠಯ್ಯ
ಪ್ರಕಾರ:
ಇತರೆ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಕ್ರೌನ್
ಮುದ್ರಣ:
2017
ರಕ್ಷಾಪುಟ:
---
ಪುಟಗಳು:
304
ಬೆಲೆ:
180 ರೂ.
ಲೇಖಕರ ಪರಿಚಯ
ಹೆಸರಾಂತ ವಿದ್ವಾಂಸರೂ, ಕನ್ನಡ ಸಾರಸ್ವತ ಲೋಕಕ್ಕೆ ಮೌಲಿಕ ಕೊಡುಗೆಗಳನ್ನು ನೀಡಿದ ಲೇಖಕರೂ, ತೀನಂಶ್ರೀ ಎಂದೇ ಜನಜನಿತರೂ ಆದ ಪ್ರೊ. ತೀ.ನಂ. ಶ್ರೀಕಂಠಯ್ಯನವರು ಜನಿಸಿದ್ದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತೀರ್ಥಪುರದಲ್ಲಿ, ೧೯೦೬ರ ನವೆಂಬರ್ ೨೬ರಂದು. ತಂದೆ ನಂಜುಂಡಯ್ಯ, ತಾಯಿ ಭಾಗೀರಥಮ್ಮ. ವ್ಯಾಸಂಗದಲ್ಲಿ ಅಪಾರ ಆಸ್ಥೆಯಿದ್ದ ತೀನಂಶ್ರೀಯವರು ಬಿ.ಎ. ಪದವಿಯನ್ನು ೧೯೨೬ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸ್ವೀಕರಿಸಿದಾಗ ಅವರು ಗಳಿಸಿದ್ದು ಆರು ಸ್ವರ್ಣ ಪದಕಗಳನ್ನು . ನಂತರ, ಅವರು ೧೯೨೯ರಲ್ಲಿ ಇಂಗ್ಲಿಷ್ ಎಂ.ಎ. ಹಾಗೂ ೧೯೩೧ರಲ್ಲಿ ಕನ್ನಡ ಎಂ.ಎ. ಪದವಿಗಳನ್ನು ಪ್ರಥಮ ಸ್ಥಾನದಲ್ಲಿ ತಮ್ಮದಾಗಿಸಿಕೊಂಡರು. ಅಮಲ್ದಾರ್ ಆಗಿ, ಮೈಸೂರು ಸಂವಿಧಾನ ಪರಿಷತ್ತಿನಲ್ಲಿ ಭಾಷಾಂತರಕಾರರಾಗಿ, ಕಾಲೇಜುಗಳಲ್ಲಿ ಸೂಪರಿಂಟೆಂಡೆಂಟ್ ಆಗಿಯೂ ಸೇವೆ ಸಲ್ಲಿಸಿರುವ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ನೆಚ್ಚಿನ ಗುರುಗಳಾಗಿದ್ದವರು. ಹಾಗೂ ಪ್ರೊ. ಎ.ಆರ್. ಕೃಷ್ಣಶಾಸ್ತ್ರೀ ಮೊದಲಾದ ವಿದ್ವಾಂಸರ ಜೊತೆಯಲ್ಲಿ ಕನ್ನಡ ನಿಘಂಟಿನ ಸಿದ್ಧತೆಯ ಕಾರ್ಯದಲ್ಲಿ ಕೆಲಸ ಮಾಡಿದವರು. ೧೯೬೬ರ ಸೆಪ್ಟೆಂಬರ್ ೭ರಂದು ಸ್ವರ್ಗಸ್ಥರಾದ ಪ್ರೊ. ತೀನಂಶ್ರೀಯವರ ಲೇಖನಿಯಿಂದ ಮೂಡಿರುವ ಕೃತಿಗಳು: ಭಾರತೀಯ ಕಾವ್ಯಮೀಮಾಂಸೆ, ರನ್ನಕವಿ ಗದಾಯುದ್ಧ ಸಂಗ್ರಹಂ, ನಂಬಿಯಣ್ಣನ ರಗಳೆ, ಪಂಪ, ಒಲುಮೆ, ಕಾವ್ಯಾನುಭವ, ಕನ್ನಡ ಮಾಧ್ಯಮ ವ್ಯಾಕರಣ, ಬಿಡಿಮುತ್ತು, ಕಾವ್ಯ ಸಮೀಕ್ಷೆ, ಸಮಗ್ರ ಕವಿತೆಗಳು, ಸಮಾಲೋಕನ, ರಾಕ್ಷಸನ ಮುದ್ರಿಕೆ, ನಂಟರು, ಹೆಣ್ಣುಮಕ್ಕಳ ಪದಗಳು, Imagination in Indian Poetics and Other Literary Studies, Affricates in Kannada Speech and Other Linguistic Papers