ಸಾರಾಂಶ

ನಾವು ಪೃಥ್ವಿಯ ಮಕ್ಕಳು. ಆ ಪೃಥ್ವಿಯ ಗತಿಗೆ ಹೊಂದಿಕೊಳ್ಳಬೇಕು. ಶರದ್ಶಿಶಿರಗಳು ಎಷ್ಟು ಅಗತ್ಯವೋ, ಗ್ರೀಷ್ಮ ವಸಂತಗಳು ಅಷ್ಟೇ ಅಗತ್ಯ, ಅನಿವಾರ್ಯ. ಇದು ಪ್ರಕೃತಿಯು ಸಂವಿಧಾನ. ಆದ್ದರಿಂದ ಈ ಭೂಮಿಯ ಬದುಕಿನ ನಿರಂತರತೆಯೊಂದಿಗೆ ಬೆರತು ಹೋಗಬೇಕು.
ನಿಮ್ಮನ್ನು ಪ್ರೀತಿಸೋ ಸಹನಾ ಏನಾಗಬೇಕು. ನಮ್ಮಿಬ್ಬರ ಮದುವೆ ತೀರಾ ಅನಿರೀಕ್ಷಿತ. ಇದೊಂದು ಆಕಸ್ಮಿಕವೆಂದು ಮರೆತುಬಿಡೋಣ ಕಾದಂಬರಿಯ ಒಂದು ಪಾತ್ರವಾದ ಭಾರತಿಯ ಮಾತು.
ಸುಧಾಕರನ ಸಮಾಧಾನ ಅಷ್ಟೇ ತೀಕ್ಷ್ಣವಾಗಿತ್ತು.
ಅದೆಲ್ಲ ಅಷ್ಟು ಸುಲಭಾನಾ? ಅಗ್ನಿಸಾಕ್ಷಿಯಾಗಿ ನಿನ್ನ ಕುತ್ತಿಗೆಗೆ ತಾಳಿ ಕಟ್ಟಿ ನನ್ನವಳನ್ನಾಗಿ ಮಾಡಿಕೊಂಡಿದ್ದೇನೆ. ಅನಿರೀಕ್ಷಿತವೋ, ಆಕಸ್ಮಿಕವೋ, ಮನಃಪೂರ್ತಿಯಾಗಿ ನಿನ್ನ ಜೊತೆ ಸಪ್ತಪದಿಗಳನ್ನು ತುಳಿದು ವಾಗ್ದಾನ ಮಾಡಿದ್ದೀನಿ. ಅದಕ್ಕೆ ಬದ್ಧನಾಗಿರುವುದು ನನ್ನ ಕರ್ತವ್ಯ.
ಬದುಕಿನ ಬದ್ಧತೆಯ ಬಗ್ಗೆ ಅಚಲವಾದ ನಂಬಿಕೆ ಅನಿವಾರ್ಯವಾಗಿ ಬಿಡುತ್ತೆ. ಕಾದಂಬರಿಯ ಪ್ರತಿ ಪಾತ್ರವು ಅದನ್ನೇ ಹೇಳುತ್ತದೆ.

ಸಪ್ತಪದಿ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1979
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
226
ಬೆಲೆ:
140 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು