ಸಾರಾಂಶ

ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಬದುಕಿನ ಒಂದೇ ನಾಣ್ಯದ ಎರಡು ಮುಖಗಳು. ತ್ಯಾಗರಾಜರು 'ಸಾಕ್ಷಾತ್ಕಾರ' ನೀ ಸದ್ಭಕ್ತಿ ಸಂಗೀತ ಜ್ಞಾನವಿಹೀನುಲುಕು ಮೋಕ್ಷಮುಗದಾ?' ಎಂದು ಪ್ರಶ್ನಿಸಿದ್ದಾರೆ. ಪದೇ ಪದೇ ಈ ವಿಚಾರ ನನ್ನ ಮನಸ್ಸಿನಲ್ಲಿ ಮೂಡಿದಾಗ ಸಂಗೀತವನ್ನ ಬಳಸಿಕೊಂಡು ಯಾಕೆ ಒಂದು ಕಾದಂಬರಿಯನ್ನು ಬರೆಯಬಾರದು ಎನಿಸಿತು. ಒಂದಿಷ್ಟು ಸಂಗೀತ ಲೋಕ ಹೊಕ್ಕೆ. ಅನರ್ಘ್ಯ ರತ್ನಗಳ ದರ್ಶನ. ಮೋಹನಾ, ಆಹಿರಿ ರೇವತಿ, ಆನಂದ ಭೈರವಿ, ಶಂಕರಾಭರಣ, ಕಾವೇರಿ, ಕಲ್ಯಾಣಿ...ರಾಗಗಳ ಸಾಕ್ಷಾತ್ಕಾರ.
ಈ ಕಾದಂಬರಿ ಸಂಗೀತದ ಭಾವ, ರಸ, ಭಕ್ತಿಯನ್ನು ಪರಿಚಯಿಸಿದೆ. ಆದರೆ ನನ್ನ ಮಿತಿಯೊಳಗೆ ಕಾದಂಬರಿಗೆ ಬೇಕಾಗುವಷ್ಟು ಸಂಗೀತವನ್ನು ಮಾತ್ರ ಬಳಸಿಕೊಂಡಿದ್ದೇನೆ.

ಸಪ್ತರಂಜಿನಿ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1993
ರಕ್ಷಾಪುಟ:
ಪ.ಸ. ಕುಮಾರ್
ಪುಟಗಳು:
220
ಬೆಲೆ:
130 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು