ಷಾಕ್ಮೋರಾ!... ಸೈನ್ಸ್ ಮತ್ತು ಮಾನವಾತೀತ ಶಕ್ತಿಗಳ ನಡುವೆ ಘರ್ಷಣೆ!... ಭಾರತಿ, ಎನ್ನಾರಾವ್, ಪುಟ್ಟ ಮಗು, ಶಶಿ, ವಿಭ್ರಾಂತ್ ಮುಂತಾದ ಪಾತ್ರಗಳ ಸುತ್ತ ಕುತೂಹಲಭರಿತವಾಗಿ ಹಬ್ಬಿಕೊಂಡು ಸಾಗುವ ಕಥೆ ಹಜ್ಜೆ ಹಜ್ಜೆಗೂ ಓದುಗರಿಗೆ ವಿಶಿಷ್ಟ ಅನುಭವವೊಂದನ್ನು ಕೊಡುತ್ತದೆ.
ಹೆಸರಾಂತ ಕಥೆಗಾರ ಯಂಡಮೂರಿ ವೀರೇಂದ್ರನಾಥರ ಲೇಖನಿಯಿಂದ ಮೂಡಿಬಂದಿರುವ 'ಷಾಕ್ಮೋರ' ಕಾದಂಬರಿಯನ್ನು ಹಿರಿಯ ಲೇಖಕ ರಾಜಾ ಚೆಂಡೂರ್ ಕನ್ನಡಕ್ಕೆ ಸೊಗಸಾಗಿ ತಂದಿದ್ದಾರೆ. ಈ ಜೋಡಿ ಲೇಖಕರ ಮತ್ತಷ್ಟು ಕೃತಿಗಳನ್ನು ಕನ್ನಡಿಗರಿಗಾಗಿ ಹೊರತಂದಿರುವ ಹೊರತರುತ್ತಿರುವ ಕಾಯಕ ನಮ್ಮದು ಎಂದು ತಿಳಿಸಲು ಸಂತಸಪಡುತ್ತೇವೆ.